ADVERTISEMENT

ಗುವಾಹಟಿ ಐಐಟಿಯಿಂದ ಕ್ಯಾನ್ಸರ್ ಔಷಧ ಅಭಿವೃದ್ಧಿ

ಪಿಟಿಐ
Published 2 ಜನವರಿ 2025, 14:33 IST
Last Updated 2 ಜನವರಿ 2025, 14:33 IST
.
.   

ನವದೆಹಲಿ: ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು (ಐಐಟಿ) ಕ್ಯಾನ್ಸರ್‌ ಚಿಕಿತ್ಸೆಗಾಗಿ ಅತ್ಯಾಧುನಿಕ, ಇಂಜೆಕ್ಟ್‌ ಮಾಡಬಹುದಾದ ಹೈಡ್ರೊಜೆಲ್‌ ಅನ್ನು ಅಭಿವೃದ್ಧಿಪಡಿಸಿದೆ. ಈ ಔಷಧದ ಅಡ್ಡಪರಿಣಾಮಗಳು ಕಡಿಮೆ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕತ್ತದ ಬೋಸ್‌ ಇನ್‌ಸ್ಟಿಟ್ಯೂಟ್ ಜತೆಗೂಡಿ ಈ ಸಂಶೋಧನೆ ಮಾಡಲಾಗಿದ್ದು, ಇದನ್ನು ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿಯ ‘ಮೆಟೀರಿಯಲ್‌ ಹಾರಿಜನ್ಸ್‌’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಾಧ್ಯಾಪಕ ದೇವಪ್ರತಿಮ್‌ ದಾಸ್‌ ಅವರು, ‘ಜಗತ್ತಿನಾದ್ಯಂತ ಲಕ್ಷಾಂತರ ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಕಿಮೊಥೆರಪಿ, ಶಸ್ತ್ರಚಿಕಿತ್ಸೆಗೆ ಅವುಗಳದ್ದೇ ಆದ ಮಿತಿಗಳಿವೆ. ಕಿಮೊಥೆರಪಿಯಿಂದ ಸಾಕಷ್ಟು ಅಡ್ಡಪರಿಣಾಮಗಳಿವೆ. ಹೀಗಾಗಿ ಈ ಹೈಡ್ರೊಜೆಲ್‌ ಔಷಧವನ್ನು ಅಭಿವೃದ್ಧಿಪಡಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.