ADVERTISEMENT

ಐಐಟಿ– ಜೋದ್ಪುರದಿಂದ ಮದ್ಯ ಸೇವನೆ ತಪಾಸಣೆ ಉಪಕರಣ ಅಭಿವೃದ್ಧಿ

ಐಐಟಿ– ಜೋದ್ಪುರದಿಂದ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 0:30 IST
Last Updated 23 ಫೆಬ್ರುವರಿ 2024, 0:30 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)– ಜೋದ್ಪುರವು ಕಡಿಮೆ ವೆಚ್ಚದ ಮದ್ಯ ಸೇವನೆ ತಪಾಸಣೆ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಇದು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಪ್ರಕರಣಗಳಲ್ಲಿ, ಚಾಲಕ ಸೇವಿಸಿರುವ ಮದ್ಯದ ಪ್ರಮಾಣವನ್ನು ಪತ್ತೆ ಮಾಡುವುದರಲ್ಲದೆ ಗಂಭೀರ ಕಾಯಿಲೆಗಳನ್ನು ಪತ್ತೆಮಾಡಲೂ ಸಹಕಾರಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊಠಡಿ ಉಷ್ಣಾಂಶದಲ್ಲಿ ಆಮ್ಲೀಯ ಲೋಹಗಳು ಮತ್ತು ನ್ಯಾನೊ ಸಿಲಿಕಾನ್‌ಗಳನ್ನು ಬಳಸಿಕೊಂಡು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಅಸ್ತಮಾ, ಡಯಾಬಿಟಿಕ್‌ ಕಿಟೊಆ್ಯಸಿಡೋಸಿಸ್‌, ನಿದ್ರೆ ವೇಳೆ ಉಸಿರಾಟದ ಸಮಸ್ಯೆ, ಹೃದಯ ಸ್ತಂಭನದಂಥ ಕಾಯಿಲೆಗಳನ್ನು ಈ ಉಪಕರಣ ಪತ್ತೆ ಮಾಡಲಿದೆ. ಇದಕ್ಕಾಗಿ ಉಪಕರಣದ ಸೆನ್ಸರ್‌ನಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಎಲೆಕ್ಟ್ರಾನಿಕ್‌ ನೋಸ್‌ ಅಥವಾ ಆರ್ಟಿಫಿಷಿಯಲ್‌ ನೋಸ್‌ನಂಥ ಸೆನ್ಸರ್‌ಗಳು ಮತ್ತು ಡೇಟಾ ಅನಾಲಿಟಿಕ್ಸ್‌ಗಳನ್ನು ಇದಕ್ಕೆ ಅಳವಡಿಸಲಾಗಿದೆ ಎಂದು ಐಐಟಿ ಜೋದ್ಪುರದ ಎಲೆಕ್ಟ್ರಾನಿಕಲ್‌ ಎಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕಿ ಸಾಕ್ಷಿ ದಾಂಡೇಕರ್‌ ಅವರು ಹೇಳಿದ್ದಾರೆ. 

ಸದ್ಯ ಚಾಲ್ತಿಯಲ್ಲಿರುವ ಇಂಧನ ಆಧರಿತ ಸೆಲ್‌ ಚಾಲಿತ ಮದ್ಯ ತಪಾಸಣೆ ಉಪಕರಣಗಳಿಗಿಂತ ಈ ಉಪಕರಣಗಳ ವೆಚ್ಚ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.