ADVERTISEMENT

ಮಲೇಷ್ಯಾದಲ್ಲಿ ಎಂಜಿನಿಯರಿಂಗ್ ಸಂಸ್ಥೆ ಆರಂಭಿಸಲಿದೆ ಐಐಟಿ ಖರಗ್‌ಪುರ

ಪಿಟಿಐ
Published 25 ಡಿಸೆಂಬರ್ 2022, 4:22 IST
Last Updated 25 ಡಿಸೆಂಬರ್ 2022, 4:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖರಗ್‌ಪುರ:ಐಐಟಿ ಖರಗ್‌ಪುರವು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಯೋಜನೆಯ ಭಾಗವಾಗಿ ಮಲೇಷ್ಯಾದಲ್ಲಿ ಎಂಜಿನಿಯರಿಂಗ್ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ ಎಂದು ಅದರ (ಐಐಟಿ ಖರಗ್‌ಪುರ) ನಿರ್ದೇಶಕ ವಿ.ಕೆ.ತಿವಾರಿ ತಿಳಿಸಿದ್ದಾರೆ.

ವಿಶ್ವದ ಅಗ್ರ ಹತ್ತು ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದು ಎನಿಸಿಕೊಳ್ಳುವ ಗುರಿ ಇರಿಸಿಕೊಳ್ಳಲಾಗಿದೆ ಎಂದೂ ತಿವಾರಿ ಹೇಳಿದ್ದಾರೆ.

ಶನಿವಾರ ನಡೆದ 68ನೇಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,'ಐಐಟಿ ಖರಗ್‌ಪುರವು ಮಲೇಷ್ಯಾದಲ್ಲಿ ಐಐಟಿ ಸಂಸ್ಥೆ ತೆರೆಯುವ ಮೂಲಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತು ಮೂಡಿಸುವ ಗುರಿಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಇದು (ಸಂಸ್ಥೆ ಸ್ಥಾಪನೆಯು) ಪ್ರಮುಖ ಹಂತವಾಗಲಿದೆ' ಎಂದಿದ್ದಾರೆ.

ADVERTISEMENT

ಆದರೆ, ಮಲೇಷ್ಯಾದಲ್ಲಿ ಯಾವಾಗ ಕಾಲೇಜು ಆರಂಭಿಸಲಾಗುತ್ತದೆ ಎಂಬ ಬಗ್ಗೆ ನಿರ್ದಿಷ್ಠ ಸಮಯವನ್ನು ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.