ಚೆನ್ನೈ: ಲಲಿತಕಲೆಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಸಂಸ್ಥೆಯಲ್ಲಿನ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದು ಐಐಟಿ–ಮದ್ರಾಸ್ ಮಂಗಳವಾರ ತಿಳಿಸಿದೆ.
2025–26ನೇ ಶೈಕ್ಷಣಿಕ ವರ್ಷದಿಂದ ಬಿ.ಟೆಕ್ ಹಾಗೂ ಬಿ.ಎಸ್ ಕೋರ್ಸ್‌ಗಳಿಗೆ ‘ಲಲಿತಕಲೆಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ಕೃಷ್ಟತೆ’(ಎಫ್‌ಎಸಿಇ) ಕೋಟಾ ಅಡಿ ಪ್ರವೇಶ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಬಿ.ಟೆಕ್ ಮತ್ತು ಬಿ.ಎಸ್‌ನ ಪ್ರತಿ ಪ್ರೋಗ್ರಾಮ್‌ಗಲ್ಲಿಎರಡು ಸೀಟುಗಳನ್ನು ‘ಎಫ್‌ಎಸಿಇ’ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಈ ಪೈಕಿ, ಒಂದು ಸೀಟು ಮಹಿಳೆಯರಿಗೆ ಮೀಸಲಾಗಿರುತ್ತದೆ.
ಇಂತಹ ಕ್ರಮ ಕೈಗೊಂಡಿರುವ ದೇಶದ ಮೊದಲ ಐಐಟಿ ಎಂಬ ಹೆಗ್ಗಳಿಕೆಗೆ ಐಐಟಿ–ಮದ್ರಾಸ್ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.