ADVERTISEMENT

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳ ಅಧ್ಯಯನ ನಡೆಸಿದ ಐಐಟಿ– ನಾಸಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 14:41 IST
Last Updated 21 ಅಕ್ಟೋಬರ್ 2022, 14:41 IST
   

ಚೆನ್ನೈ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಸೂಕ್ಷ್ಮಾಣುಜೀವಿಗಳ ನಡುವಿನ ವರ್ತನೆ ಕುರಿತುಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ–ಎಂ) ಮತ್ತು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧಕರು ಮಹತ್ವದ ಅಧ್ಯಯನ ನಡೆಸಿವೆ.

ಐಎಸ್ಎಸ್‌ನಲ್ಲಿರುವ ಸೂಕ್ಷ್ಮಾಣುಜೀವಿಗಳಿಂದ ವಿವಿಧ ಸೂಕ್ಷ್ಮಾಣುಜೀವಿಗಳಿಗೂ ಪ್ರಯೋಜನವಿದೆ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನೂ ತಡೆಯುತ್ತವೆ ಎನ್ನುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಐಎಸ್ಎಸ್‌ ಅನ್ನು ಸೋಂಕುರಹಿತಗೊಳಿಸಲು ಮತ್ತುಗಗನಯಾತ್ರಿಗಳ ಆರೋಗ್ಯದ ಮೇಲಿನ ದುಷ್ಪರಿಣಾಮ ತಗ್ಗಿಸುವ ತಂತ್ರಜ್ಞಾನ ರೂಪಿಸಲು ಈ ಅಧ್ಯಯನ ನೆರವಾಗಲಿದೆ ಎಂದು ಮದ್ರಾಸ್‌ ಐಐಟಿ ಸಂಸ್ಥೆ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಐಎಸ್ಎಸ್‌ನ ಏಳು ಜಾಗಗಳಲ್ಲಿ ಮೂರು ಬಾರಿಯ ಬಾಹ್ಯಾಕಾಶ ಯಾನದ ವೇಳೆ ಸಂಗ್ರಹಿಸಿದ ಸೂಕ್ಷ್ಮಜೀವಿಯ ಮಾದರಿಯ ದತ್ತಾಂಶವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.

ADVERTISEMENT

ಐಎಸ್ಎಸ್‌ನಲ್ಲಿರುವಪ್ರಮುಖ ಸೂಕ್ಷ್ಮಾಣುಜೀವಿ ಕ್ಲೆಬ್ಸಿಯೆಲ್ಲಾ ನ್ಯುಮೋನಿಯೆ ತನ್ನ ಸುತ್ತಮುತ್ತಲಿನ ಇತರ ಸೂಕ್ಷ್ಮಾಣುಜೀವಿಗಳಿಗೆ ಪ್ರಯೋಜನಕಾರಿಯಾಗಿದೆ.ಅಲ್ಲದೆ, ಇದು ವಿಶೇಷವಾಗಿ ಪ್ಯಾಂಟೊಯ ತಳಿಯ ಬ್ಯಾಕ್ಟೀರಿಯಾ ಆಸ್ಪರ್ಜಿಲಸ್ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ. ಇದನ್ನು ಮದ್ರಾಸ್‌ ಐಐಟಿಯ ಭೂಪತ್‌ ಮತ್ತು ಜ್ಯೋತಿ ಮೆಹ್ತಾ ಸ್ಕೂಲ್ ಆಫ್ ಬಯೋ ಸೈನ್ಸಸ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ರಾಬರ್ಟ್ ಬಾಷ್ ಸೆಂಟರ್ ಫಾರ್ ಡಾಟಾ ಸೈನ್ಸ್ ಅಂಡ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌(ಆರ್‌ಬಿಸಿಡಿಎಸ್‌ಎಐ) ಪ್ರಮುಖ ಸದಸ್ಯ ಡಾ. ಕಾರ್ತಿಕ್ ರಾಮನ್, ನಾಸಾದ ಜೆಪಿಎಲ್‌‌ನ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್‌ಶೋಧನೆ ಮಾಡಿದ್ದಾರೆ. ಈ ಅಧ್ಯಯನ ವರದಿಯು ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆ‘ಮೈಕ್ರೋಬಯೋಮ್‌’ನಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.