ಚೆನ್ನೈ: ಮದ್ರಾಸ್ ಐಐಟಿ ಸಂಶೋಧಕಿ ಒಬ್ಬರಿಗೆ ಕ್ಯಾಂಪಸ್‌ನ ಅನತಿ ದೂರದಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಈ ಕುರಿತು ಐಐಟಿ ಮದ್ರಾಸ್ ಕ್ಯಾಂಪಸ್‌ನ ಹೊರವಲಯದಲ್ಲಿನ ಬೇಕರಿಯೊಂದರ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಶೋಧಕಿ ತಮ್ಮ ವಿದ್ಯಾರ್ಥಿಯೊಂದಿಗೆ ವೇಲಾಚರಿ–ತಾರಾಮಣಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಂಶೋಧಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೇಕರಿಯು ಐಐಟಿ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ. ಈ ಕುರಿತು ಸಂತ್ರಸ್ತೆ ನಮಗೆ ದೂರು ನೀಡಿದ್ದು ಕ್ಯಾಂಪಸ್ ಅಲ್ಲದೇ ಕ್ಯಾಂಪಸ್ ಸುತ್ತಮುತ್ತವೂ ಭದ್ರತೆ ಹೆಚ್ಚಳ ಮಾಡಿದ್ದು ವ್ಯಾಪಕ ಸಿಸಿಟಿವಿಗಳನ್ನು ಅಳವಡಿಕೆ ಮಾಡಿದ್ದೇವೆ ಎಂದು ಮದ್ರಾಸ್ ಐಐಟಿ ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆದ ಪ್ರಕರಣ ವ್ಯಾಪಕ ಸುದ್ದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.