ADVERTISEMENT

ಉತ್ತರ ‍ಪ್ರದೇಶ | ಸರ್ಕಾರಿ ಭೂಮಿಯಲ್ಲಿದ್ದ ಮಸೀದಿ ನೆಲಸಮ

ಪಿಟಿಐ
Published 7 ಫೆಬ್ರುವರಿ 2026, 16:00 IST
Last Updated 7 ಫೆಬ್ರುವರಿ 2026, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರೇಲಿ: ಜಿಲ್ಲೆಯ ಪಿಪರಿಯಾ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯನ್ನು ಜಿಲ್ಲಾಡಳಿತವು ಪೊಲೀಸ್ ಭದ್ರತೆಯೊಂದಿಗೆ ಶನಿವಾರ ನೆಲಸಮಗೊಳಿಸಿದೆ.

ಕಂದಾಯ ದಾಖಲೆಯಲ್ಲಿ ಬಂಜರು ಸರ್ಕಾರಿ ಜಮೀನು ಎಂದು ನಮೂದಾಗಿರುವ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿತ್ತು ಎಂದು ಬರೇಲಿ ಸದರ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಪ್ರಮೋದ್‌ ಕುಮಾರ್ ತಿಳಿಸಿದ್ದಾರೆ.

18 ವರ್ಷದ ಕಾನೂನು ಹೋರಾಟದ ನಂತರ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಬುಲ್ಡೋಜರ್‌ ಬಳಸಿ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವ ಮೂಲಕ 300 ಚದರ ಗಜಗಳಷ್ಟು ಸರ್ಕಾರಿ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಯಿತು. ಅತಿಕ್ರಮಣ ಮಾಡಿಕೊಂಡಿದ್ದವರಿಗೆ ದಂಡ ವಿಧಿಸಲಾಗಿದೆ ಎಂದು ಎಸ್‌ಡಿಎಂ ಹೇಳಿದ್ದಾರೆ.

ADVERTISEMENT

‘ಮಸೀದಿ–ಎ–ಅಲಾ ಹಜರತ್ ಸುಮಾರು 50 ವರ್ಷ ಹಳೆಯದು. ಯಾವೊಂದು ಮುನ್ಸೂಚನೆ ನೀಡದೆ ಕೆಡವಲಾಗಿದೆ’ ಎಂದು ಗ್ರಾಮದ ಮೊಹಮ್ಮದ್ ಉಮರ್ ದೂರಿದ್ದಾರೆ.

‘ನ್ಯಾಯಾಲಯದ ಆದೇಶವನ್ನು ಸ್ವೀಕರಿಸುತ್ತಿದ್ದಂತೆ, ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿತ್ತು. ಅವರು ಸ್ಪಂದಿಸದಿದ್ದಕ್ಕೆ ನೆಲಸಮಗೊಳಿಸಿದ್ದೇವೆ’ ಎಂದು ಪ್ರಮೋದ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.