ADVERTISEMENT

ಹರಿಯಾಣ: 4512 ಬಾಟಲಿ ಅಕ್ರಮ ಮದ್ಯ ವಶ

ಏಜೆನ್ಸೀಸ್
Published 27 ಡಿಸೆಂಬರ್ 2018, 2:16 IST
Last Updated 27 ಡಿಸೆಂಬರ್ 2018, 2:16 IST
   

ಚಂಡೀಗಡ: ಟ್ರಕ್‌ವೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 4512 ಮದ್ಯದಬಾಟಲಿಗಳಿದ್ದ 376 ಬಾಕ್ಸ್‌ಗಳನ್ನು ಫತೇಹಾಬಾದ್‌ ಜಿಲ್ಲೆಯಲ್ಲಿ ಹರಿಯಾಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟ್ರಕ್‌ ಚಾಲಕಲಕ್ಷ್ಮಣ್‌ ಎಂಬಾತನನ್ನು ಬಂಧಿಸಲಾಗಿದ್ದು,ಸಿರ್ಸಾ ಜಿಲ್ಲೆಯ ರಾನಿಯಾ ನಿವಾಸಿ ಎನ್ನಲಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಸಾಗಿಸುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ರಾತಿಯಾ ಬೈಪಾಸ್‌ ಬ್ರಿಡ್ಜ್‌ ಬಳಿಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಚಾಲಕ ಟ್ರಕ್‌ ಅನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ. ತಕ್ಷಣ ಆತನನ್ನು ಬಂಧಿಸಲಾಗಿದೆ. ದೇಶೀಯ ಮದ್ಯದ ಬಾಟಲಿಗಳಿದ್ದ350 ಹಾಗೂ ದೇಶದಲ್ಲೇ ಉತ್ಪಾದಿಸಲಾದ ವಿದೇಶಿ ಮದ್ಯದ ಬಾಟಲಿಗಳಿದ್ದ26 ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಅಬಕಾರಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದೇವೇಳೆ ಪೊಲೀಸ್‌ ಮಹಾ ನಿರ್ದೇಶಕ ಬಿ.ಎಸ್‌.ಸಂಧು, ಫತೇಹಾಬಾದ್‌ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವಂತೆ ಪೊಲೀಸ್‌ಸೂಪರಿಂಟೆಂಡೆಂಟ್‌ ಅವರಿಗೆ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.