ADVERTISEMENT

ಕೇರಳಕ್ಕೆ ಮತ್ತೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಪಿಟಿಐ
Published 10 ಜೂನ್ 2025, 13:39 IST
Last Updated 10 ಜೂನ್ 2025, 13:39 IST
<div class="paragraphs"><p> ಮಳೆ</p></div>

ಮಳೆ

   

ತಿರುವನಂತಪುರ: ಭಾರಿ ಮಳೆಯಿಂದ ತತ್ತರಿಸಿ ಹೋಗಿದ್ದ ಕೇರಳ ರಾಜ್ಯಕ್ಕೆ ಭಾರತೀಯ ಹವಾಮಾನ ಇಲಾಖೆ ಈ ವಾರ ಮತ್ತೆ ಮಳೆ ಆರ್ಭಟದ ಮುನ್ಸೂಚನೆ ನೀಡಿದೆ. 

ಕೇರಳದ ಎರಡು ಜಿಲ್ಲೆಗಳಿಗೆ ಗುರುವಾರ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಶುಕ್ರವಾರ ನಾಲ್ಕು ಮತ್ತು ಶನಿವಾರ ಒಂಬತ್ತು ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌’ ಇರಲಿದೆ. ಕನಿಷ್ಟ 11ರಿಂದ 20 ಸೆಂಟಿ ಮೀಟರ್‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರದಿಂದ ಶನಿವಾರದವರೆಗೂ ಹಲವು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ADVERTISEMENT

ಮಂಗಳವಾರ ಪ್ರತಿ ಗಂಟೆಗೆ 30 ಕಿಲೋ ಮೀಟರ್‌ ನಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಶನಿವಾರ ಇನ್ನಷ್ಟು ಬಲ ಪಡೆದು ಗಂಟೆಗೆ 50 ಕಿ.ಮೀ.ಯಿಂದ 60 ಕಿಲೋ ಮೀಟರ್‌ವರೆಗಿನ ವೇಗದಲ್ಲಿ ಗಾಳಿ ಬೀಸಲಿದೆ.

ಮೇ 24ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಮೇ 31ರವರೆಗೂ ಮಳೆ ಆರ್ಭಟಿಸಿದ್ದರಿಂದ ಕೇರಳದ ಉತ್ತರದ ಜಿಲ್ಲೆಗಳಲ್ಲಿ ಭಾರಿ ಹಾನಿಗಳಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.