ADVERTISEMENT

ಭಾರತವನ್ನು ಗುರುತಿಸುವ ಭಾಷೆಯಾಗಬೇಕು ಹಿಂದಿ: ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 7:34 IST
Last Updated 14 ಸೆಪ್ಟೆಂಬರ್ 2019, 7:34 IST
   

ನವದೆಹಲಿ:ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಹಿಂದಿಭಾಷೆಯುಭಾರತವನ್ನು ಬೆಸೆಯುವ ಸಾಮರ್ಥ್ಯ ಹೊಂದಿದೆ. ಹಿಂದಿಯು ಭಾರತವನ್ನು ಜಾಗತಿಕವಾಗಿ ಗುರುತಿಸುವ ಭಾಷೆಯಾಗಬೇಕಾದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.

ದೇಶಾದ್ಯಂತ ಇಂದು ಕೇಂದ್ರ ಸರ್ಕಾರ ‘ಹಿಂದಿ ದಿವಸ್‌’ ಆಚರಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮಾಡಿರುವ ಅಮಿತ್‌ ಶಾ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಭಾರತ ವಿಭಿನ್ನ ಭಾಷೆಗಳ ದೇಶ. ಇಲ್ಲಿನ ಎಲ್ಲ ಭಾಷೆಗಳಿಗೂ ಅವುಗಳದ್ದೇ ಪ್ರಾಮುಖ್ಯತೆ ಇದೆ. ಆದರೆ, ಜಾಗತಿಕ ಮಟ್ಟದಲ್ಲಿ ದೇಶದ ಹೆಗ್ಗುರುತಾಗಬಲ್ಲ ಒಂದು ಭಾಷೆಯನ್ನು ಹೊಂದಬೇಕಾದ ಅಗತ್ಯ ಹೆಚ್ಚಿದೆ. ಇಂದು ದೇಶವನ್ನು ಬೆಸೆಯಬಲ್ಲ, ವ್ಯಾಪಕವಾಗಿ ಮಾತನಾಡಬಲ್ಲ ಒಂದು ಭಾಷೆ ಎಂದರೆ ಅದು ಹಿಂದಿ ಮಾತ್ರ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಮಹಾತ್ಮಗಾಂಧಿ ಮತ್ತು ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಅವರ ಆಶಯಗಳನ್ನು ಈಡೇರಿಸಬೇಕಿದ್ದರೆ, ದೇಶದ ಜನತೆ ಮಾತೃಭಾಷೆಯ ಜತೆಗೇ ಹಿಂದಿಯನ್ನು ಹೆಚ್ಚಾಗಿ ಬಳಸಬೇಕು,’ ಎಂದೂ ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದಿಷ್ಟೇ ಅಲ್ಲ, ಬಿಜೆಪಿ ರಾಷ್ಟ್ರ ಘಟಕದಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರೂ, ಟ್ವೀಟ್‌ ಮಾಡಿ ಹಿಂದಿಯನ್ನು ವ್ಯಾಪಕವಾಗಿ ಬಳಸಬೇಕು ಎಂದು ಕೋರಿದ್ದಾರೆ. ‘ಹಿಂದಿ ದೇಶಾದ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ. ಇದು ಭಾರತದ ಏಕತೆಯ ತಿರುಳು. ಅಲ್ಲದೆ, ಜಾಗತಿಕವಾಗಿ ಹಿಂದಿ ನಮ್ಮ ಗುರುತು. ಎಲ್ಲರಿಗೂ ಹಿಂದಿನ ದಿವಸ್‌ನ ಶುಭಾಶಯಗಳು. ನಾವೆಲ್ಲರೂ ಹಿಂದಿಯನ್ನು ಹೆಚ್ಚಾಗಿ ಬಳಸೋಣ,’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.