ADVERTISEMENT

15–18 ವಯಸ್ಸಿನವರಿಗೆ ಶೇ 80 ರಷ್ಟು ಲಸಿಕೆ ಸಾಧನೆ: ಆರೋಗ್ಯ ಸಚಿವ

ಪಿಟಿಐ
Published 24 ಮೇ 2022, 10:49 IST
Last Updated 24 ಮೇ 2022, 10:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 15–18ನೇ ವಯಸ್ಸಿನ ಶೇ 80 ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್‌ ಮಾಂಡವೀಯ ಮಂಗಳವಾರ ಹೇಳಿದರು.

‘ದೇಶದಲ್ಲಿ ಇದುವರೆಗೆ 192.52 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. 15–18 ವಯಸ್ಸಿನವರಿಗೆ ಜನವರಿಯಿಂದ ಲಸಿಕೆ ನೀಡಲು ಆರಂಭಿಸಿ ಇಲ್ಲಿಯ ತನಕ 5.92 ಕೋಟಿ ಮೊದಲ ಡೋಸ್‌, 12–14 ವಯೋಮಾನದವರಿಗೆ ಮಾರ್ಚ್‌ 16ರಿಂದ ಆರಂಭವಾದ ಅಭಿಯಾನದಲ್ಲಿ ಇಲ್ಲಿಯವರೆಗೆ 3.30 ಕೋಟಿ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ಭಾರತ ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಮಾಂಡವೀಯ ಟ್ವೀಟ್‌ ಮಾಡಿದ್ದಾರೆ.

ಕಳೆದ ಜನವರಿಯಲ್ಲಿ ದೇಶದಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಎರಡು ವರ್ಷದ ಹಿಂದೆ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಕಳೆದ ಏಪ್ರಿಲ್‌ನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರು ಬೂಸ್ಟರ್‌ ಡೋಸ್‌ ಪಡೆಯಲು ಸರ್ಕಾರ ಅನುಮತಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.