ADVERTISEMENT

ಕೈಯಲ್ಲಿ ಬರೆದು 100 ಪುಟಗಳ ಬಜೆಟ್‌ ಮಂಡಿಸಿದ ಛತ್ತೀಸಗಢ ಹಣಕಾಸು ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2025, 2:50 IST
Last Updated 5 ಮಾರ್ಚ್ 2025, 2:50 IST
<div class="paragraphs"><p>ಕೈಯಲ್ಲಿ ಬರೆದು 100 ಪುಟಗಳ ಬಜೆಟ್‌ ಮಂಡಿಸಿದ ಛತ್ತೀಸಗಢ ಹಣಕಾಸು ಸಚಿವ</p></div>

ಕೈಯಲ್ಲಿ ಬರೆದು 100 ಪುಟಗಳ ಬಜೆಟ್‌ ಮಂಡಿಸಿದ ಛತ್ತೀಸಗಢ ಹಣಕಾಸು ಸಚಿವ

   

ಚಿತ್ರ ಕೃಪೆ: ಎಕ್ಸ್‌

ರಾಯ್‌ಪುರ: ಕಂಪ್ಯೂಟರ್‌ ಪ್ರತಿ ಅಥವಾ ಟ್ಯಾಬ್‌ ಬಳಕೆಯ ಈ ಕಾಲದಲ್ಲಿ ಛತ್ತೀಸಗಢದ ಹಣಕಾಸು ಸಚಿವ ಒ.ಪಿ ಚೌಧರಿ ಅವರು 100 ಪುಟಗಳ ಬಜೆಟ್‌ ಅನ್ನು ಕೈಯಲ್ಲಿ ಬರೆದು ಮಂಡಿಸಿದ್ದಾರೆ. 

ADVERTISEMENT

ಚೌಧರಿ ಅವರು ಸೋಮವಾರ ರಾಜ್ಯದ 2025–26ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ₹1.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.

ಛತ್ತೀಸಗಢ ವಿಧಾನಸಭೆಯ ಇತಿಹಾಸದಲ್ಲಿ ಕಂಪ್ಯೂಟರ್‌ನಲ್ಲಿ ಟೈಪಿಸಿದ ಪ್ರತಿ ಬಳಸದೆ ಹಸ್ತ ಪ್ರತಿಯಲ್ಲಿ ಬಜೆಟ್‌ ಮಂಡನೆಯಾಗಿರುವುದು ಇದೇ ಮೊದಲ ಬಾರಿಗೆ ಎಂದು ಡೆಕ್ಕನ್‌ ಕ್ರಾನಿಕಲ್‌ ವರದಿ ತಿಳಿಸಿದೆ. 

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಚೌಧರಿ ಅವರು, ‘ಛತ್ತೀಸಗಢಕ್ಕೆ ಐತಿಹಾಸಿಕ ಉಪಕ್ರಮ. ರಾಜ್ಯದ ಮೊದಲ ಕೈಬರಹದ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ 100 ಪುಟಗಳ ಬಜೆಟ್ ಸಂಪ್ರದಾಯವು ಸ್ವಂತಿಕೆಯ ಹೊಸ ಉದಾಹರಣೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. 

ಒ.ಪಿ. ಚೌಧರಿ ಈ ಹಿಂದೆ ರಾಯ್‌ಪುರದ ಜಿಲ್ಲಾಧಿಕಾರಿಯಾಗಿದ್ದರು. ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 22 ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಹೆಗ್ಗುರುತು ಇವರದ್ದು.

ಛತ್ತೀಸಗಢದಲ್ಲಿ ಬಿಜೆಪಿ ಆಡಳಿತವಿದ್ದು, ವಿಷ್ಣು ದೇವ್‌ ಸಾಯಿ ಮುಖ್ಯಮಂತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.