ADVERTISEMENT

ತ್ರಿಪುರಾದಲ್ಲಿ ಇದೇ ಮೊದಲ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡಿದ ಹುಲಿ

ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಇದೇ ಮೊದಲ ಬಾರಿಗೆ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ.

ಪಿಟಿಐ
Published 19 ಮೇ 2025, 7:07 IST
Last Updated 19 ಮೇ 2025, 7:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಗರ್ತಲಾ: ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಇದೇ ಮೊದಲ ಬಾರಿಗೆ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ.

ತ್ರಿಪುರಾದ ಶಿಪಾಹಿಜಾಲಾ ಜಿಲ್ಲೆಯ ಶಿಪಾಹಿಜಾಲಾ ವನ್ಯಧಾಮದಲ್ಲಿ ಹೆಣ್ಣು ಹುಲಿ ‘ಶಿಫಾಲಿ’ ಒಮ್ಮೆಗೆ ಮೂರು ಮರಿಗಳಿಗೆ ಜನ್ಮ ನೀಡಿದೆ.

ADVERTISEMENT

1972ರಲ್ಲಿ ಶಿಪಾಹಿಜಾಲಾ ವನ್ಯಧಾಮ ಸ್ಥಾಪನೆಯ ನಂತರ ಇದೇ ಮೊದಲ ಬಾರಿಗೆ ಹುಲಿ, ಮರಿಗಳಿಗೆ ಜನ್ಮ ನೀಡಿದೆ. 2014ರಲ್ಲಿ ಹುಲಿಯೊಂದು ಗರ್ಭದಲ್ಲೇ ಸತ್ತ ಮರಿಗೆ ಜನ್ಮನೀಡಿತ್ತು.

ಕಳೆದ ವರ್ಷ ಫೆಬ್ರುವರಿಯಲ್ಲಿ ಪಶ್ಚಿಮ ಬಂಗಾಳದಿಂದ ಒಂದು ಗಂಡು ಒಂದು ಹೆಣ್ಣು ಹುಲಿ ತರಲಾಗಿತ್ತು. ಸಂತಾನ ವೃದ್ದಿಯಾಗಿರುವುದು ಸಂತಸ ತರಿಸಿದೆ. ಮರಿಗಳು ಆರೋಗ್ಯವಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ವನ್ಯಧಾಮದ ನಿರ್ದೇಶಕ ವಿಶ್ವಜೀತ್ ದಾಸ್ ಹೇಳಿದ್ದಾರೆ.

ಈ ಬೆಳವಣಿಗೆ ತ್ರಿಪುರಾ ರಾಜ್ಯದಲ್ಲಿ ವನ್ಯಜೀವಿ, ಕಾಡು ಸಂರಕ್ಷಣೆಯ ಕಾಳಜಿಯನ್ನು ಎತ್ತಿತೋರಿಸುತ್ತದೆ. ಪ್ರತಿ ವರ್ಷ ಒಂದೂವರೆ ಲಕ್ಷ ಜನ ಶಿಪಾಹಿಜಾಲಾ ವನ್ಯಧಾಮಕ್ಕೆ ಭೇಟಿ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.