ADVERTISEMENT

ಮೋದಿ ಅವಧಿಯಲ್ಲಿ ಮೌನ ಸುರಕ್ಷಿತವಲ್ಲ: ಕಪಿಲ್ ಸಿಬಲ್

‘ಮೋದಿ ಯುಗದಲ್ಲಿ ಭಾರತ’ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 19:06 IST
Last Updated 2 ಅಕ್ಟೋಬರ್ 2021, 19:06 IST
ಕಪಿಲ್ ಸಿಬಲ್
ಕಪಿಲ್ ಸಿಬಲ್   

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಮೌನವಾಗಿರುವುದು ಸುರಕ್ಷಿತವಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಶನಿವಾರ ಹೇಳಿ ದ್ದಾರೆ.‘ಈ ಸರ್ಕಾರದ ದೌರ್ಜನ್ಯಗಳ ವಿರುದ್ಧ ಯಾರಾದರೂ ಮೌನವಾಗಿದ್ದರೆ, ಅವರೂ ಅದರಲ್ಲಿ ಭಾಗಿಯಾಗಿದ್ದಾರೆ ಎಂಬ ಅರ್ಥ ಬರುತ್ತದೆ’ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.

‘ಮೋದಿ ಯುಗದಲ್ಲಿ ಭಾರತ’ ಎಂಬ ವಿಷಯದ ಕುರಿತು ಇಲ್ಲಿ ನಡೆದ ಗಿರೀಶ್ ಪಟೇಲ್ ಸ್ಮಾರಕ ಉಪನ್ಯಾಸದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಅವರು, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ನ ಈಚಿನ ನಿರ್ಧಾರಗಳನ್ನು ಪ್ರಶ್ನಿಸಿದ್ದ ಸಿಬಲ್ ಮನೆ ಎದುರು ಪ್ರತಿಭಟನೆ ನಡೆದಿತ್ತು.

ADVERTISEMENT

ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಮಾಡಿದ್ದ ಟ್ವೀಟ್‌ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಚಿದಂಬರಂ ಏನು ಹೇಳಿದ್ದಾರೋ ಆ ಬಗ್ಗೆ ಅವರನ್ನು ಕೇಳಿ. ಅವರು ನನ್ನ ಸಹೋದ್ಯೋಗಿ. ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯ ದೃಷ್ಟಿಯಲ್ಲಿ ಮೋದಿ ಅವರ ಬಗ್ಗೆ ಹೇಳಬೇಕೆಂದರೆ, ಮೌನವಾ ಗಿರುವುದು ಸುರಕ್ಷಿತವಲ್ಲ ಎಂದು ಹೇಳಬಲ್ಲೆ’ ಎಂದು ಉತ್ತರಿಸಿದ್ದಾರೆ.

ದೆಹಲಿಯ ಸಿಬಲ್ ಮನೆಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರಟ್ವೀಟ್ ಮಾಡಿದ್ದ ಚಿದಂಬರಂ, ಮೌನದ ಆಯ್ಕೆ ಬಗ್ಗೆ ಪ್ರಸ್ತಾಪಿಸಿದ್ದರು. ‘ನಾವು ಪಕ್ಷದ ವೇದಿಕೆಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನನ್ನು ಅಸಹಾಯಕನನ್ನಾಗಿಸಿದೆ. ಸಿಬಲ್ ನಿವಾಸದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುವ ಚಿತ್ರ ನೋಡಿದಾಗ ನೋವು ಮತ್ತು ಅಸಹಾಯಕತೆ ಉಂಟಾಗುತ್ತದೆ’ ಎಂದು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.