ನವದೆಹಲಿ: ಕೋವಿಡ್–19 ಲಸಿಕೆ ನೀಡಿಕೆಯಲ್ಲಿ ಭಾರತವೀಗ ಅಮೆರಿಕವನ್ನೂ ಮೀರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
‘ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಒಟ್ಟು ಲಸಿಕೆ ನೀಡಿಕೆಯಲ್ಲಿ ಅಮೆರಿಕವನ್ನೂ ಮೀರಿಸಲಾಗಿದೆ’ ಎಂದು ಸಚಿವಾಲಯ ಟ್ವೀಟ್ ಮಾಡಿದ್ದು, ಹೆಚ್ಚು ಲಸಿಕೆ ನೀಡಿದ ದೇಶಗಳ ಪಟ್ಟಿಯನ್ನೂ ಪ್ರಕಟಿಸಿದೆ.
ಪಟ್ಟಿಯ ಪ್ರಕಾರ, ಅಮೆರಿದಲ್ಲಿ ಈವರೆಗೆ 32,33,27,328 ಡೋಸ್ ಲಸಿಕೆ ನೀಡಲಾಗಿದ್ದರೆ ಭಾರತದಲ್ಲಿ 32,36,63,297 ಡೋಸ್ ಲಸಿಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.