
ಪ್ರಜಾವಾಣಿ ವಾರ್ತೆ
ನವದೆಹಲಿ: ‘ಭಾರತದ ಸೆಮಿಕಂಡಕ್ಟರ್ ಅಭಿಯಾನದ (ಐಎಸ್‌ಎಂ 1.0) ಅಡಿಯಲ್ಲಿ ಅನುಮೋದನೆಗೊಂಡಿರುವ 10 ಯೋಜನೆಗಳ ಪೈಕಿ ಮೊದಲ ಯೋಜನೆಯ ವಾಣಿಜ್ಯ ಉತ್ಪಾದನೆಯು ಫೆಬ್ರುವರಿ ಅಂತ್ಯದ ವೇಳೆ ಆರಂಭಗೊಳ್ಳಲಿದೆ’ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಸೋಮವಾರ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಶೃಂಗದಲ್ಲಿ ಮಾತನಾಡಿರುವ ಕೃಷ್ಣನ್, ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆ ಮೈಕ್ರಾನ್, ಚಿಪ್‌ಗಳ ಉತ್ಪಾದನೆ ಆರಂಭಿಸಲಿದೆ. ಮೊದಲ ಹಂತದಲ್ಲಿ ಎಐ ಪ್ರಕ್ರಿಯೆ ಕ್ಷಿಪ್ರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹೈ –ಬ್ಯಾಂಡ್‌ವಿಡ್ತ್ ಮೆಮೊರಿ (ಎಚ್‌ಬಿಎಂ) ಚಿಪ್‌ಗಳ ಉತ್ಪಾದನೆಯತ್ತ ಗಮನಹರಿಸಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.