ADVERTISEMENT

ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕ ಅಧಿಕೃತವಲ್ಲ, ನಮ್ಮದೇ ಬೇರೆ ಎಂದ ಕೇಂದ್ರ!

ಪಿಟಿಐ
Published 11 ಡಿಸೆಂಬರ್ 2025, 15:40 IST
Last Updated 11 ಡಿಸೆಂಬರ್ 2025, 15:40 IST
<div class="paragraphs"><p>ದೆಹಲಿಯಲ್ಲಿ ವಾಯು ಮಾಲಿನ್ಯ</p></div>

ದೆಹಲಿಯಲ್ಲಿ ವಾಯು ಮಾಲಿನ್ಯ

   

–ಪಿಟಿಐ ಚಿತ್ರ

ನವದೆಹಲಿ: ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕದ (ಎಕ್ಯೂಐ) ಆಧಾರದ ಮೇಲೆ ಬರುವ ವರದಿಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ಅರುಹಿದೆ.

ADVERTISEMENT

ವಾಯು ಗುಣಮಟ್ಟ ಸೂಚ್ಯಂಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಡಾಟಾಬೇಸ್‌ ಅನುಸಾರ ಬಂದ ವರದಿಯ ಬಗ್ಗೆ ಭಾರತದ ಸ್ಥಾನದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಈ ಉತ್ತರ ನೀಡಿದರು.

ವಾಯು ಗುಣಮಟ್ಟ ಸೂಚ್ಯಂಕ ಅಳಿಯಲು ಇಂತಹದ್ದೇ ಮಾನದಂಡ ಇದೇ ಎಂಬುದನ್ನು ಯಾವುದೇ ಅಧಿಕೃತ ಸಂಸ್ಥೆ ನಡೆಸುವುದಿಲ್ಲ. ಹಾಗಾಗಿ ಎಕ್ಯೂಐ ವರದಿಗಳು ಅಂತಿಮವಲ್ಲ. ವಾಯುಗುಣಮಟ್ಟದ ಪಟ್ಟಿ ನೀಡುವಾಗ ಕೆಲ ಮಾನದಂಡಗಳನ್ನು ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯಷ್ಟೇ. ಜಿ–ಎಕ್ಯೂಐ ವರದಿಗಳೇ ಅಂತಿಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾನದಂಡಗಳು ಪ್ರಾದೇಶಿಕವಾಗಿ ಬೇರೆ ಬೇರೆ ಇರುತ್ತವೆ. ಅದರ ಆಧಾರದ ಮೇಲೆ ನಾವು ಪ್ರತಿ ವರ್ಷ ಸೆಪ್ಟೆಂಬರ್ 7 ರಂದು ಶುದ್ಧ ಗಾಳಿ ದಿನ ಎಂದು ಆಚರಿಸಿ ದೇಶದ ಸ್ವಚ್ಚ ವಾಯು ಹೊಂದಿರುವ ನಗರಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.