ADVERTISEMENT

ಕೋವಿಡ್‌ ಲಸಿಕೆ: ವಿಶ್ವದಲ್ಲೇ ಅತಿ ಹೆಚ್ಚು ಡೋಸ್‌ ಖರೀದಿಸಿದ ಭಾರತ

ಪಿಟಿಐ
Published 4 ಡಿಸೆಂಬರ್ 2020, 22:23 IST
Last Updated 4 ಡಿಸೆಂಬರ್ 2020, 22:23 IST
   

ನವದೆಹಲಿ: ಭಾರತವು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರವಾಗಿದೆ.

ಭಾರತವು ಒಟ್ಟು 160 ಕೋಟಿ ಡೋಸ್‌ಗಳನ್ನು ಖರೀದಿಸಿದ್ದು ಇದರಿಂದ ಒಟ್ಟು ಜನಸಂಖ್ಯೆಯ ಶೇಕಡ 60 ರಷ್ಟು ಮಂದಿಗೆ ಲಸಿಕೆ ನೀಡಬಹುದು ಎಂದು ಹೇಳಲಾಗಿದೆ.

ಭಾರತವು ಆಸ್ಟ್ರಾಜೆನೆಕಾ ಕಂಪನಿಯಿಂದ50 ಕೋಟಿ (ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವುದು), ಅಮೆರಿಕದ ನೊವಾವ್ಯಾಕ್ಸ್‌ ಕಂಪನಿಯಿಂದ 100 ಕೋಟಿ ಹಾಗೂ ರಷ್ಯಾದ ಗಮಲೆಯಾ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನಿಂದ (ಸ್ಪುಟ್ನಿಕ್‌–ವಿ) 10 ಕೋಟಿ ಡೋಸ್‌ಗಳನ್ನು ಖರೀದಿಸಿದೆ’ ಎಂದು ಅಮೆರಿಕದ ಡ್ಯೂಕ್‌ ಯೂನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ತಿಳಿಸಿದೆ.

ADVERTISEMENT

‘ಅತಿ ಹೆಚ್ಚು ಕೋವಿಡ್‌ ಲಸಿಕೆ ಖರೀದಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ನಂತರದ ಸ್ಥಾನಗಳಲ್ಲಿವೆ’ ಎಂದೂ ಹೇಳಿದೆ.

‘ಸರ್ಕಾರಿ ಅಧಿಕಾರಿಗಳು ಹಾಗೂ ಇತರ ಮೂಲಗಳಿಂದ ಕಲೆಹಾಕಿದ ಮಾಹಿತಿಯ ಆಧಾರದಲ್ಲಿ ಈ ಅಂಕಿ ಅಂಶಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಸೂಕ್ಷ್ಮ ರೋಗಾಣು ಶಾಸ್ತ್ರಜ್ಞ ಶಾಹೀದ್‌ ಜಮೀಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.