ADVERTISEMENT

ಭಾರತ–ಬ್ರೆಜಿಲ್‌ ನಡುವೆ ಕೈದಿಗಳ ವಿನಿಮಯ

ಪಿಟಿಐ
Published 5 ಏಪ್ರಿಲ್ 2019, 18:29 IST
Last Updated 5 ಏಪ್ರಿಲ್ 2019, 18:29 IST

ನವದೆಹಲಿ: ಭಾರತ ಮತ್ತು ಬ್ರೆಜಿಲ್‌ನಲ್ಲಿ ಶಿಕ್ಷೆಗೊಳಗಾಗಿರುವ ಎರಡೂ ದೇಶಗಳ ಕೈದಿಗಳಿಗೆ ತಮ್ಮ ತಾಯ್ನಾಡಿನಲ್ಲಿ ಶಿಕ್ಷಾವಧಿ ಪೂರ್ಣ ಗೊಳಿಸಲು ಅವಕಾಶ ದೊರೆಯಲಿದೆ.

ಈ ಸಂಬಂಧ ಎರಡೂ ದೇಶಗಳ ನಡುವೆ ಏರ್ಪಟಿದ್ದ ಒಪ್ಪಂದದ ಅನುಮೋದಿತ ಪ್ರತಿಗಳು ಉಭಯ ದೇಶಗಳ ನಡುವೆ ವಿನಿಮಯವಾಗಿದೆ.

ಈ ಕುರಿತು ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ, ಯಾವ ಬಗೆಯ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ವಿನಿಮಯಕ್ಕೆ ಅರ್ಹರು ಎಂಬುದರ ಮಾಹಿತಿ ನೀಡಿದೆ.

ADVERTISEMENT

ಅದರ ಪ್ರಕಾರ, ತನಿಖೆ, ವಿಚಾರಣೆ ಪೂರ್ಣಗೊಳ್ಳದ, ಮರಣ ದಂಡನೆ ಶಿಕ್ಷೆ ಎದುರಿಸುತ್ತಿರುವ, ಸೇನಾ ಕಾನೂನಿನ ಅಡಿ ಬಂಧಿತರಾಗಿರುವ ಹಾಗೂ ದೇಶದ ಸಾರ್ವಭೌಮತೆ, ಭದ್ರತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ಹೊರತುಪಡಿಸಿ ಉಳಿದ ಬಗೆಯ ಶಿಕ್ಷೆ ಎದುರಿಸುತ್ತಿರುವ ಕೈದಿಗಳನ್ನು ವಿನಿಮಯಕ್ಕೆ ಅರ್ಹರು.

ಭಾರತ ಮತ್ತು ಬ್ರೆಜಿಲ್‌ 2013ರ ಅ. 15ರಂದು ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದವು. ಭಾರತ 2014ರಲ್ಲಿ ಈ ಒಪ್ಪಂದವನ್ನು ಅನುಮೋದಿಸಿದ್ದರೆ, ಬ್ರೆಜಿಲ್‌ 20 18ರ ಅಕ್ಟೋಬರ್‌ 24ರಂದು ಅನು ಮೋದಿಸಿತ್ತು. ಎರಡೂ ದೇಶಗಳ ನಡುವೆ ಅನುಮೋದಿತ ಪ್ರತಿಗಳು 2019ರ ಜನವರಿ 24ರಂದು ವಿನಿಮಯ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.