ADVERTISEMENT

ವಿದೇಶದಲ್ಲಿ ಕೊವ್ಯಾಕ್ಸಿನ್‌ ಉತ್ಪಾದನೆಗೆ ಭಾರತ ಚಿಂತನೆ: ವರದಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 15:50 IST
Last Updated 1 ಮೇ 2021, 15:50 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಕೋವಿಡ್–19 ಲಸಿಕೆಯನ್ನು ವಿದೇಶದಲ್ಲೂ ಉತ್ಪಾದನೆ ಮಾಡಲು ಅನುವು ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಕೋವಿಡ್–19 ಎರಡನೇ ಅಲೆ ತೀವ್ರಗೊಂಡಿರುವುದು ಮತ್ತು ಲಸಿಕೆ ಕೊರತೆ ಬೆನ್ನಲ್ಲೇ ಸರ್ಕಾರ ಈ ಕುರಿತು ಯೋಚನೆ ಮಾಡಿದೆ.

ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಯ ವಿದೇಶಿ ಉತ್ಪಾದನೆಯು ‘ವಾಣಿಜ್ಯ ಘಟಕಗಳ ನಡುವಣ ತಂತ್ರಜ್ಞಾನ ವರ್ಗಾವಣೆ’ ಮೂಲಕ ನಡೆಯುವ ಸಾಧ್ಯತೆ ಇದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.