
ನವದೆಹಲಿ: ‘ಭೌಗೋಳಿಕ–ರಾಜಕೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಭಾರತವು ಬೇರೆ ದೇಶಗಳಿಂದ ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಕಚ್ಚಾತೈಲ ಖರೀದಿಸುವುದನ್ನು ಮುಂದುವರಿಸಲಿದೆ’ ಎಂದು ಸಂಸದೀಯ ಸಮಿತಿಯ ಮುಂದೆ ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಮುಂದೆ ವಿದೇಶಾಂಗ ವ್ಯವಹಾರಗಳು ಹಾಗೂ ವಾಣಿಜ್ಯ ಇಲಾಖೆಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರೂವರೆ ಗಂಟೆ ನಡೆದ ಸಭೆಯು ಅತ್ಯಂತ ಪರಿಣಾಮಕಾರಿಯಾಗಿತ್ತು ಎಂದು ತರೂರ್ ತಿಳಿಸಿದ್ದಾರೆ. ಸಮಿತಿಯ 30 ಮಂದಿ ಸದಸ್ಯರ ಪೈಕಿ 28 ಮಂದಿ ಹಾಜರಿದ್ದರು.
‘ಅಧಿಕಾರಿಗಳು ಪ್ರತಿ ಪ್ರಶ್ನೆಗೂ ವಿವರವಾಗಿ, ಆತ್ಮವಿಶ್ವಾಸದಿಂದ ಉತ್ತರ ನೀಡಿದರು. ಸಮಿತಿಯೂ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ’ ಎಂದು ಸಭೆಯ ಬಳಿಕ ಶಶಿ ತರೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.