ADVERTISEMENT

Covid-19 India Update: ಕಳೆದ 24 ಗಂಟೆಗಳಲ್ಲಿ 7,964 ಹೊಸ ಪ್ರಕರಣ, 265 ಸಾವು

ಏಜೆನ್ಸೀಸ್
Published 30 ಮೇ 2020, 16:54 IST
Last Updated 30 ಮೇ 2020, 16:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 7,964 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 265 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಈವರೆಗೆ ಒಟ್ಟು 1,73,763ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 4,971 ಜನರು ಸಾವಿಗೀಡಾಗಿದ್ದಾರೆ.

86,422 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 82,370 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ADVERTISEMENT

ಕೋವಿಡ್‌-19 ಕೇಂದ್ರಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 62,228 ಪ್ರಕರಣಗಳು ಬೆಳಕಿಗೆ ಬಂದಿದ್ದು, 2,098 ಜನರು ಮೃತರಾಗಿದ್ದಾರೆ. 33,133 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು,26,997 ಮಂದಿ ಗುಣಮುಖರಾಗಿದ್ದಾರೆ.

ಗುಜರಾತ್‌ನಲ್ಲಿ 980, ದೆಹಲಿಯಲ್ಲಿ 398, ಮಧ್ಯಪ್ರದೇಶದಲ್ಲಿ 334, ಪಶ್ಚಿಮ ಬಂಗಾಳದಲ್ಲಿ 302, ಉತ್ತರ ಪ್ರದೇಶದಲ್ಲಿ 198ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.