ADVERTISEMENT

ಕರ್ತಾರಪುರ ಕಾರಿಡಾರ್‌: 4 ಕಿ.ಮೀ ರಸ್ತೆ ನಿರ್ಮಿಸಲಿರುವ ಭಾರತ

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಹೆದ್ದಾರಿ ಖಾತೆ ರಾಜ್ಯ ಸಚಿವ ಮನ್‌ಸುಕ್‌ ಎಲ್‌. ಮಾಂಡವೀಯ

ಪಿಟಿಐ
Published 13 ಡಿಸೆಂಬರ್ 2018, 11:25 IST
Last Updated 13 ಡಿಸೆಂಬರ್ 2018, 11:25 IST
ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರ
ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರ   

ನವದೆಹಲಿ:ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್‌ಗೆ ತೆರಳುವ 4 ಕಿ.ಮೀ. ರಸ್ತೆಯನ್ನು ಭಾರತವೇ ನಿರ್ಮಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ತಿಳಿಸಿದೆ.

’ಗುರುದಾಸ್‌ಪುರ ಜಿಲ್ಲೆಯ ದೇರಾಬಾಬಾ ನಾನಕ್‌ ಮಂದಿರದಿಂದ ಪಾಕಿಸ್ತಾನಕ್ಕೆ ತಾಗಿರುವ ಅಂತರರಾಷ್ಟ್ರೀಯ ಗಡಿಯವರೆಗಿನ 4 ಕಿ.ಮೀ ರಸ್ತೆಯನ್ನು ಭಾರತವೇ ನಿರ್ಮಿಸಲಿದೆ, ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ‘ ಎಂದು ಹೆದ್ದಾರಿ ಖಾತೆ ರಾಜ್ಯ ಸಚಿವ ಮನ್‌ಸುಕ್‌ ಎಲ್‌. ಮಾಂಡವೀಯ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ ಸ್ಥಳವೂ ಇದೇ ಆಗಿದೆ. ಭಾರತದ ಪಂಜಾಬ್‌ನ ಗಡಿಯಿಂದ 4 ಕಿ.ಮೀ.ನಷ್ಟು ದೂರದಲ್ಲಿ ರಾವಿ ನದಿಯ ದಡದ ಪಾಕಿಸ್ತಾನದ ನೆಲದಲ್ಲಿ ಈ ಗುರುದ್ವಾರವಿದೆ.‌

ADVERTISEMENT

ಪ್ರಸ್ತಾವಿತ ಕಾರಿಡಾರ್‌ಗೆ ನವೆಂಬರ್‌ 26ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.