ADVERTISEMENT

ವಾಯುಪಡೆ ವಿಮಾನದ ಮೂಲಕ ಕಾಬೂಲ್‌ನಿಂದ 80 ಭಾರತೀಯರ ಸ್ಥಳಾಂತರ

ಪಿಟಿಐ
Published 21 ಆಗಸ್ಟ್ 2021, 10:42 IST
Last Updated 21 ಆಗಸ್ಟ್ 2021, 10:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಾಲಿಬಾನಿಗಳು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಅಲ್ಲಿನ ‘ಭದ್ರತಾ ವ್ಯವಸ್ಥೆ‘ ಹದಗೆಡುತ್ತಿರುವ ನಡುವೆಯೇ ಶನಿವಾರ ಕಾಬೂಲ್‌ನಿಂದ 80 ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ.

80 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ, ತಜಕಿಸ್ತಾನದ ದುಶಾಂಬೆ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಸಂಜೆ ವೇಳೆಗೆ ದೆಹಲಿ ಸಮೀಪದ ಹಿಂಡೋನ್ ವಾಯುನೆಲೆಯನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನಿಗಳು ಕಾಬೂಲ್ ಪ್ರವೇಶಿಸಿದ ನಂತರದಲ್ಲಿ, ಭಾರತ, ವಾಯುಪಡೆಯ ಎರಡು ಯುದ್ಧ ವಿಮಾನಗಳ ಮೂಲಕ ರಾಯಭಾರಿ ಕಚೇರಿಯ ಸಿಬ್ಬಂದಿ ಸೇರಿದಂತೆ 200 ಜನರನ್ನು ಸ್ಥಳಾಂತರಿಸಿತ್ತು. ಸೋಮವಾರ 40 ಭಾರತೀಯರನ್ನು ಸ್ಥಳಾಂತರಿಸಿತು. ಎರಡನೇ ಹಂತದಲ್ಲಿ, ಮಂಗಳವಾರ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಕೆಲವು ನಾಗರಿಕರನ್ನೂ ಒಳಗೊಂಡಂತೆ ಸುಮಾರು 150 ಜನರನ್ನು ಸ್ಥಳಾಂತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.