ADVERTISEMENT

ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವತ್ತ ಭಾರತದ ಗಮನ ಇರಲಿ: ನೀತಿ ಆಯೋಗದ ಉಪಾಧ್ಯಕ್ಷ

ಪಿಟಿಐ
Published 5 ಫೆಬ್ರುವರಿ 2023, 10:58 IST
Last Updated 5 ಫೆಬ್ರುವರಿ 2023, 10:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚೀನಾ ಜೊತೆಗಿನ ಸಂಪೂರ್ಣ ವಾಣಿಜ್ಯ ವ್ಯವಹಾರಗಳ ಕೊರತೆ ಬದಲು, ಕೆಲವು ನಿರ್ಣಾಯಕ ಸರಕುಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಭಾರತ ಗಮನಹರಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್‌ ಕೆ. ಬೆರಿ ಭಾನುವಾರ ಹೇಳಿದ್ದಾರೆ.

ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐ), ನವೀಕರಿಸಬಹುದಾದ ಪೂರೈಕೆ ಸರಪಳಿ ಸೇರಿದಂತೆ ನಿರ್ಣಾಯಕ ಸಂಪನ್ಮೂಲಗಳ ಇತರ ಪೂರೈಕೆಯ ಮೂಲಗಳನ್ನು ವೈವಿಧ್ಯಗೊಳಿಸುವುದು ಸರಿಯಾದ ಕ್ರಮವಾಗಲಿದೆ ಎಂದು ಬೆರಿ ಅಭಿಪ್ರಾಯಪಟ್ಟಿದ್ದಾರೆ.

ಚೀನಾದೊಂದಿಗಿನ ಹೆಚ್ಚುತ್ತಿರುವ ವಹಿವಾಟು ಕೊರತೆಯನ್ನು ನಿಯಂತ್ರಿಸಲು ಭಾರತ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಚೀನಾ, ಎಪಿಐ ಉತ್ಪಾದನೆ ಮತ್ತು ರಫ್ತಿನ ವಿಶ್ವದ ದೊಡ್ಡ ದೇಶವಾಗಿದೆ. ಭಾರತದ ಹಲವು ಕಂಪನಿಗಳು ಔಷಧ ತಯಾರಿಕೆಗೆ ಚೀನಾದ ಹಲವು ಉತ್ಪನ್ನಗಳನ್ನು ಅವಲಂಬಿಸಿವೆ.

'ಭಾರತದ ಗಮನವು ಚೀನಾದೊಂದಿಗಿನ ಸಂಪೂರ್ಣ ವ್ಯವಹಾರ ಕೊರತೆಯ ಬದಲಾಗಿ, ಕೆಲವು ನಿರ್ಣಾಯಕ ಉತ್ಪನ್ನಗಳಿಗಾಗಿನ ಅವಲಂಬನೆಯನ್ನು ತಗ್ಗಿಸುವ ಕಡೆಗೆ ಇರಬೇಕು' ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.