ADVERTISEMENT

ಭಾರತ–ಫ್ರಾನ್ಸ್‌: ದ್ವಿಪಕ್ಷೀಯ ಸಂಬಂಧ ವೃದ್ದಿಗೆ ಒತ್ತು

ಪಿಟಿಐ
Published 15 ಡಿಸೆಂಬರ್ 2018, 12:41 IST
Last Updated 15 ಡಿಸೆಂಬರ್ 2018, 12:41 IST
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯುವೆಸ್‌ ಲೆ ಡ್ರಿಯನ್‌ ಅವರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ಬಳಿಕ ಪರಸ್ಪರ ಕೈಕುಲುಕಿದರು– ಪಿಟಿಐ ಚಿತ್ರ
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯುವೆಸ್‌ ಲೆ ಡ್ರಿಯನ್‌ ಅವರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ಬಳಿಕ ಪರಸ್ಪರ ಕೈಕುಲುಕಿದರು– ಪಿಟಿಐ ಚಿತ್ರ   

ನವದೆಹಲಿ: ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು ಹಾಗೂ ಇಂಧನ ಕ್ಷೇತ್ರಗಳಲ್ಲಿ ಫ್ರಾನ್ಸ್‌ ಮತ್ತು ಭಾರತ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯುವೆಸ್‌ ಲೆ ಡ್ರಿಯನ್‌ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ.

‘ಎರಡು ರಾಷ್ಟ್ರಗಳ ನಡುವಿನ ಮಾತುಕತೆಯೂ ಫಲಪ್ರದವಾಗಿದೆ. ಪರಸ್ಪರ ಸಹಕಾರದಿಂದ ಹೆಚ್ಚು ನಿಕಟದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆಗೆ ಒತ್ತು ನೀಡಿದ್ದೇವೆ. ಇಂಡೋ–ಫೆಸಿಫಿಕ್‌ ಭಾಗದಲ್ಲಿ ಎರಡು ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದು, ಇದರಿಂದ ಈ ಭಾಗದ ಇತರೆ ರಾಷ್ಟ್ರಗಳಿಗೂ ನೆರವಾಗಲಿದೆ’ ಎಂದು ಸಚಿವೆ ಸುಷ್ಮಾ ತಿಳಿಸಿದರು.

ADVERTISEMENT

‘ನಮ್ಮ ರಕ್ಷಣಾ ಸಂಬಂಧ ಐತಿಹಾಸಿಕವಾದುದು. ಎರಡು ರಾಷ್ಟ್ರಗಳು ಜತೆಗೂಡಿ ಜಂಟಿ ಸೇನಾ ಕವಾಯತು ಹಾಗೂ ತರಬೇತಿಯಲ್ಲಿ ಪಾಲ್ಗೊಂಡಿವೆ’ ಎಂದು ಜಂಟಿ ಪತ್ರಿಕಾಗೋಷ್ಠಿ ವೇಳೆ ಸುಷ್ಮಾ ತಿಳಿಸಿದರು.

ರಫೇಲ್‌ ಪ್ರಸ್ತಾಪವಿಲ್ಲ

ರಫೇಲ್‌ ಯುದ್ಧ ವಿಮಾನ ಖರೀದಿ ವಿವಾದ ಸಂದರ್ಭದಲ್ಲೇ ಫ್ರಾನ್ಸ್‌ನ ವಿದೇಶಾಂಗ ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ.

‘ಉಭಯ ನಾಯಕರ ಭೇಟಿ ವೇಳೆ ರಫೇಲ್‌ ಕುರಿತಂತೆ ಯಾವುದೇ ಚರ್ಚೆಯಾಗಿಲ್ಲ’ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.