ADVERTISEMENT

ಭಾರತ–ಫ್ರಾನ್ಸ್‌ ನೌಕಾ ಪಡೆಯ ಜಂಟಿ ಕವಾಯತು ಆರಂಭ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:34 IST
Last Updated 16 ಜನವರಿ 2023, 14:34 IST
ಐಎನ್‌ಎಸ್‌ ಚೆನ್ನೈ
ಐಎನ್‌ಎಸ್‌ ಚೆನ್ನೈ   

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನೌಕಾಪಡೆಯ 21ನೇ ಜಂಟಿ ಕವಾಯತು ಪಶ್ಚಿಮ ಸಮುದ್ರತೀರದಲ್ಲಿ ಸೋಮವಾರ ಆರಂಭಗೊಂಡಿದೆ ಎಂದು ನೌಕಾಪಡೆ ಹೇಳಿದೆ.

1993ರಲ್ಲಿ ಆರಂಭವಾದ ಈ ಜಂಟಿ ಕವಾಯತಿಗೆ 2001ರಲ್ಲಿ ‘ವರುಣಾ’ ಎಂದು ನಾಮಕರಣ ಮಾಡಲಾಯಿತು. ಇದು ಭಾರತ ಮತ್ತು ಫ್ರಾನ್ಸ್‌ ನಡುವಿನ ದ್ವಿಪಕ್ಷೀಯ ಸಹಕಾರ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.

ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್‌ ಚೆನ್ನೈ, ಐಎನ್‌ಎಸ್‌ ಟೆಗ್‌ ಸಮರ ನೌಕೆಗಳು ಹಾಗೂ ಫ್ರಾನ್ಸ್‌ನ ನೌಕಾಪಡೆಯ ವಿಮಾನವಾಹಕ ನೌಕೆ ಚಾರ್ಲ್ಸ್ ಡಿ ಗೌಲ್ ಭಾಗಿಯಾಗಿವೆ ಎಂದೂ ವಿವರಿಸಿದೆ.

ADVERTISEMENT

ಈ ಕವಾಯತು ಜನವರಿ 20ರ ವರೆಗೆ ನಡೆಯಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.