ADVERTISEMENT

ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದ ಪ್ರಜಾಪ್ರಭುತ್ವ, ಆರ್ಥಿಕ ಚೇತರಿಕೆಗೆ ಭಾರತ ಬೆಂಬಲ

ಪಿಟಿಐ
Published 10 ಮೇ 2022, 11:06 IST
Last Updated 10 ಮೇ 2022, 11:06 IST
ಶ್ರೀಲಂಕಾದ ಕೊಲಂಬೊದಲ್ಲಿ ಮಂಗಳವಾರ ಕರ್ಫ್ಯೂ ವಿಧಿಸಲಾಗಿದ್ದು, ಘರ್ಷಣೆ ವೇಳೆ ಸುಟ್ಟ ಬಸ್‌ವೊಂದರ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದ ದೃಶ್ಯ –ಎಪಿ, ಪಿಟಿಐ ಚಿತ್ರ
ಶ್ರೀಲಂಕಾದ ಕೊಲಂಬೊದಲ್ಲಿ ಮಂಗಳವಾರ ಕರ್ಫ್ಯೂ ವಿಧಿಸಲಾಗಿದ್ದು, ಘರ್ಷಣೆ ವೇಳೆ ಸುಟ್ಟ ಬಸ್‌ವೊಂದರ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದ ದೃಶ್ಯ –ಎಪಿ, ಪಿಟಿಐ ಚಿತ್ರ   

ನವದೆಹಲಿ: ಶ್ರೀಲಂಕಾದ ಪ್ರಜಾಪ್ರಭುತ್ವ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತವು ಮಂಗಳವಾರ ಹೇಳಿದೆ.

ಶ್ರೀಲಂಕಾದಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ನೆರೆಯ ರಾಷ್ಟ್ರವಾಗಿ ಐತಿಹಾಸಿಕ ಸಂಬಂಧಗಳೊಂದಿಗೆ ಭಾರತವು ಶ್ರೀಲಂಕಾದ ಚೇತರಿಕೆಗೆ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಹೇಳಿದ್ದಾರೆ.

‘ಆದ್ಯತಾ ನೀತಿಗೆ ಅನುಗುಣವಾಗಿ ಭಾರತವು ಶ್ರೀಲಂಕಾದ ಜನರಿಗೆ ಈಗ ಎದುರಾಗಿರುವ ತೊಂದರೆಗಳನ್ನು ನಿವಾರಿಸಲು ಆರ್ಥಿಕ ಸಹಾಯ ನೀಡುತ್ತಿದೆ. ಈ ವರ್ಷವೇ ಭಾರತವು ₹ 27 ಸಾವಿರ ಕೋಟಿ ಆರ್ಥಿಕ ನೆರವು ವಿಸ್ತರಣೆಗೆ ಮುಂದಾಗಿದೆ. ಇದಲ್ಲದೇ, ಆಹಾರ, ಔಷಧಿ ಸೇರಿದಂತೆ ಮತ್ತಿತರರ ಅಗತ್ಯ ವಸ್ತುಗಳ ಕೊರತೆಯನ್ನು ತಗ್ಗಿಸಲು ಭಾರತದ ಜನರು ನೆರವು ನೀಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾವು ಕಳೆದ ಕೆಲವು ದಿನಗಳಿಂದ ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಕೋಪೋದ್ರಿಕ್ತರಾದ ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಕೊಲಂಬೊ ಮತ್ತು ಇತರ ಕೆಲವೆಡೆ ಹಿಂಸಾಚಾರ ಭುಗಿಲೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.