ADVERTISEMENT

ಬಲಿಷ್ಠ ಸೇನೆ: ಚೀನಾ ಮೊದಲು, ಭಾರತಕ್ಕೆ ನಾಲ್ಕನೇ ಸ್ಥಾನ

‘ಮಿಲಿಟರಿ ಡೈರೆಕ್ಟ್‌’ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ಅಧ್ಯಯನ ವರದಿ

ಪಿಟಿಐ
Published 21 ಮಾರ್ಚ್ 2021, 7:41 IST
Last Updated 21 ಮಾರ್ಚ್ 2021, 7:41 IST
ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನೆಯ ಪಥಸಂಚಲನ (ಪಿಟಿಐ)
ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನೆಯ ಪಥಸಂಚಲನ (ಪಿಟಿಐ)   

ನವದೆಹಲಿ: ಜಗತ್ತಿನಲ್ಲೇ ಚೀನಾ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ ಎಂದು ‘ಮಿಲಿಟರಿ ಡೈರೆಕ್ಟ್‌’ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ಅಧ್ಯಯನ ವರದಿ ತಿಳಿಸಿದೆ.

ಅಮೆರಿಕ ಸೇನೆಗಾಗಿಯೇ ಬಜೆಟ್‌ನಲ್ಲಿ ಅಪಾರ ಮೊತ್ತವನ್ನು ಮೀಸಲಿಟ್ಟಿದ್ದರೂ ಎರಡನೇ ಸ್ಥಾನದಲ್ಲಿದೆ. ರಷ್ಯಾ ಮೂರನೇ ಹಾಗೂ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ ಒಂಬತ್ತನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಬಜೆಟ್‌ನಲ್ಲಿನ ಮೊತ್ತ, ಕ್ರಿಯಾಶೀಲವಾಗಿರುವ ಸೇನಾ ಸಿಬ್ಬಂದಿ, ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಯ ಸಾಮರ್ಥ್ಯ ಪರಮಾಣು ಸಂಪನ್ಮೂಲಗಳು, ಸರಾಸರಿ ವೇತನ ಮತ್ತು ಉಪಕರಣಗಳ ತೂಕ ಮುಂತಾದ ಹಲವಾರು ಅಂಶಗಳನ್ನು ಪರಿಗಣಿಸಿ ‘ಮಿಲಿಟರಿ ಶಕ್ತಿ ಸೂಚ್ಯಂಕ’ ಸಿದ್ಧಪಡಿಸಲಾಗಿದೆ. ಈ ಸೂಚ್ಯಂಕದ ಅನ್ವಯ ರಾಷ್ಟ್ರಗಳಿಗೆ ಅಂಕಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ಸೂಚ್ಯಂಕದ ಅನ್ವಯ ಚೀನಾ 100 ಅಂಕಗಳಿಗೆ 82 ಗಳಿಸಿದೆ. ಪ್ರತಿ ವರ್ಷ 732 ಶತಕೋಟಿ ಡಾಲರ್‌ (₹53.02 ಲಕ್ಷ ಕೋಟಿ) ಖರ್ಚು ಮಾಡುವ ಅಮೆರಿಕ, ಜಗತ್ತಿನಲ್ಲೇ ಮಿಲಿಟರಿಗಾಗಿ ಅತಿ ಹೆಚ್ಚು ವೆಚ್ಚ ಮಾಡುವ ದೇಶವಾಗಿದೆ. ಚೀನಾ 261 ಶತಕೋಟಿ ಡಾಲರ್‌ (₹18.90 ಲಕ್ಷ ಕೋಟಿ) ಮತ್ತು ಭಾರತ 71 ಶತಕೋಟಿ ಡಾಲರ್‌ (₹5.143 ಲಕ್ಷ ಕೋಟಿ)ವೆಚ್ಚ ಮಾಡುತ್ತದೆ.

ಒಂದು ವೇಳೆ ಸಂಘರ್ಷ ನಡೆಯಬಹುದು ಎಂದು ಭಾವಿಸಿಕೊಂಡರೆ, ಚೀನಾ ನೌಕಾಪಡೆ ಮೂಲಕ ಜಯಸಾಧಿಸುತ್ತದೆ. ಅಮೆರಿಕ ವಾಯು ಪಡೆಯ ಮೂಲಕ ಮತ್ತು ರಷ್ಯಾ ಭೂಸೇನೆ ಮೂಲಕ ಜಯ ಸಾಧಿಸುತ್ತವೆ.

ಅಮೆರಿಕ ಬಳಿ ಒಟ್ಟು 14,141 ‘ಏರ್‌ಶಿಪ್‌’ಗಳಿವೆ. ರಷ್ಯಾ ಬಳಿ 4,682 ಹಾಗೂ ಚೀನಾ ಬಳಿ 3,587 ‘ಏರ್‌ಶಿಪ್‌’ಗಳಿವೆ ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.