ADVERTISEMENT

ಭಾರತದಲ್ಲಿ 100 ಕೋಟಿ ಹಿಂದೂಗಳಿರುವ ಕಾರಣ ಇದು ಹಿಂದೂ ರಾಷ್ಟ್ರ : ಬಿಜೆಪಿ ಸಂಸದ 

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 2:44 IST
Last Updated 5 ಡಿಸೆಂಬರ್ 2019, 2:44 IST
ರವಿ ಕಿಶನ್
ರವಿ ಕಿಶನ್   

ನವದೆಹಲಿ: ಭಾರತದಲ್ಲಿರುವ ಹಿಂದೂಗಳ ಸಂಖ್ಯೆ 100 ಕೋಟಿ. ಹೀಗಿರುವಾಗ ಇದು ಹಿಂದೂ ರಾಷ್ಟ್ರ. ಮುಸ್ಲಿಂ ಮತ್ತು ಕ್ರೈಸ್ತರಿರುವ ಹಲವಾರು ದೇಶಗಳಿವೆ. ನಮ್ಮಸಂಸ್ಕೃತಿ ಜೀವಂತವಾಗಿರುವ ಭಾರತವೆಂಬ ದೇಶದಲ್ಲಿ ನಾವಿದ್ದೇವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.

ಮುಸ್ಲಿಂ ಮತ್ತು ಕ್ರೈಸ್ತ ರಾಷ್ಟ್ರಗಳಿರುವಾಗ ಹಿಂದೂ ರಾಷ್ಟ್ರ ಯಾಕಿರಬಾರದು? ಎಂದು ಪ್ರಶ್ನಿಸಿರುವ ರವಿ ಕಿಶನ್, ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳು ಅನಗತ್ಯಸಮಸ್ಯೆ ಸೃಷ್ಟಿಸುತ್ತಿವೆ ಎಂದಿದ್ದಾರೆ
ಭೋಜ್‌ಪುರಿ, ಬಾಲಿವುಡ್ ನಟನಾಗಿರುವ ರವಿ ಕಿಶನ್ ಉತ್ತರ ಪ್ರದೇಶದ ಗೋರಖ್‌ಪುರ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಮುಸ್ಲಿಮೇತರ ವಲಸಿಗರು ಮತ್ತು ನಿರಾಶ್ರಿತರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುವ ‘ಪೌರತ್ವ ತಿದ್ದುಪಡಿ ಮಸೂದೆ–2019’ನ್ನು ಸಂಸತ್ತಿನ ಅಧಿವೇಶನ ದಲ್ಲಿ ಮಂಡಿಸಲು ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.