ನವದೆಹಲಿ: ಕೋವಿಡ್-19 ಲಸಿಕೆ ಕುರಿತಂತೆ ದೇಶದಲ್ಲಿ ಚರ್ಚೆಯಾಗುತ್ತಿರುವಂತೆಯೇ, ಒಂದಲ್ಲ, ಎರಡು ಕೋವಿಡ್-19 ಲಸಿಕೆ ಸಿದ್ಧವಾಗಿದ್ದು, ಮನುಕುಲದ ರಕ್ಷಣೆಗೆ ಲಭ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೊರೊನಾ ಕಾಲದಲ್ಲಿ ಭಾರತವು ಅತ್ಯಂತ ಕಡಿಮೆ ಮರಣ ಪ್ರಮಾಣ ಮತ್ತು ಗರಿಷ್ಠ ಚೇತರಿಕೆ ದಾಖಲಿಸಿದೆ. ಪ್ರಸ್ತುತ ದೇಶದಲ್ಲಿ ಎರಡು ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
16ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವೆಲ್ಲರೂ ಇಂಟರ್ ನೆಟ್ ಮುಖಾಂತರ ಜಗತ್ತಿನ ವಿವಿಧ ಮೂಲೆಗಳಿಂದ ಸಂಪರ್ಕ ಸಾಧಿಸಿದ್ದೇವೆ. ಆದರೆ ಯಾವತ್ತಿಗೂ ಮಾ ಭಾರತಿಯೊಂದಿಗೆ ನಮ್ಮ ಮನಸ್ಸು ಸಂಪರ್ಕದಲ್ಲಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶವು ಮೊದಲು ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಮತ್ತು ಟೆಸ್ಟಿಂಗ್ ಕಿಟ್ ಅನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ನಾವು ಸ್ವಾವಲಂಬಿಗಳಾಗಿದ್ದೇವೆ, ನಮ್ಮ ದೇಶದಲ್ಲೇ ಎರಡು ಕೋವಿಡ್-19 ಲಸಿಕೆ ತಯಾರಾಗಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.