ADVERTISEMENT

Covid India Update| ದೇಶದಲ್ಲಿ ಸತತ 5ನೇ ದಿನವೂ ಪ್ರಕರಣಗಳ ಏರಿಕೆ

ಪಿಟಿಐ
Published 29 ಆಗಸ್ಟ್ 2021, 5:36 IST
Last Updated 29 ಆಗಸ್ಟ್ 2021, 5:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಹೊಸದಾಗಿ 45,083 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು 460 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಪ್ರಕರಣಗಳು 3,26,95,030 ಇದ್ದು ಸೋಂಕು ಪ್ರಕರಣಗಳು ಸತತ ಐದನೇ ದಿನವೂ ಏರಿಕೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈವರೆಗೆ ಒಟ್ಟು 4,37,830 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 3,68,558 ಸಕ್ರಿಯ ಪ್ರಕರಣಗಳು ಇದ್ದು ಇದು ಒಟ್ಟು ಸೋಂಕಿನ ಪ್ರಕರಣದ ಶೇ 1.13ರಷ್ಟು ಆಗಿದೆ. ಗುಣಮುಖರಾಗುವವರ ಪ್ರಮಾಣ ಶೇ 97.53 ಇದೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.