ADVERTISEMENT

ಕೋವಿಡ್ ವಿರುದ್ಧ ಭಾರತ- ಮಾಲ್ಡೀವ್ಸ್ ಜಂಟಿ ಹೋರಾಟ: ನರೇಂದ್ರ ಮೋದಿ

ಪಿಟಿಐ
Published 21 ಸೆಪ್ಟೆಂಬರ್ 2020, 5:34 IST
Last Updated 21 ಸೆಪ್ಟೆಂಬರ್ 2020, 5:34 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ : ಭಾರತ ಮತ್ತು ಮಾಲ್ಡೀವ್ಸ್ ನಡುವೆ ಪರಸ್ಪರ ಸಹಕಾರ ಇದ್ದು, ಕೋವಿಡ್ ನಿಂದಾಗಿ ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ ಮೇಲಿನ ಪರಿಣಾಮಗಳ ವಿರುದ್ಧ ಒಟ್ಟಾಗಿ ಹೋರಾಡಲಿವೆಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ನೀಡಿದ್ದ ಆರ್ಥಿಕ ನೆರವಿಗಾಗಿ ಕೃತಜ್ಞತೆಯನ್ನು ಸಲ್ಲಿಸಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅವರು ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿ ಪ್ರಧಾನಿ ಈ ಮಾತು ಹೇಳಿದ್ದಾರೆ.

ಮಾಲ್ಡೀವ್ಸ್ ಗೆ ಅಗತ್ಯವಿದ್ದಾಗಸ್ನೇಹರಾಷ್ಟ್ರವಾಗಿ ಭಾರತ ನೆರವಾಗುತ್ತಿದೆ. 250 ಮಿಲಿಯನ್ ಡಾಲರ್ ನೆರವಿಗಾಗಿ (ಸುಮಾರು ರೂ.184 ಕೋಟಿ) ಭಾರತ ಸರ್ಕಾರ ಮತ್ತುಜನತೆಗೆ ಕೃತಜ್ಞತೆಎಂದು ಮಾಲ್ಡೀವ್ಸ್ ಅಧ್ಯಕ್ಷರು ಟ್ವೀಟ್ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.