ADVERTISEMENT

ಅಣುಶಕ್ತಿ ಮೂಲಸೌಲಭ್ಯ ಅಭಿವೃದ್ಧಿ ಭಾರತಕ್ಕೆ ಸಹಕಾರ ನೀಡಲು ಸಿದ್ದ: ಡಾ.ಕ್ರಿಸ್‌

ಪಿಟಿಐ
Published 13 ಏಪ್ರಿಲ್ 2025, 15:45 IST
Last Updated 13 ಏಪ್ರಿಲ್ 2025, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ‘ಅಣುಶಕ್ತಿ ಕ್ಷೇತ್ರದಲ್ಲಿ ಸೌಲಭ್ಯ ಅಭಿವೃದ್ಧಿಗೆ ಭಾರತಕ್ಕೆ ಸಹಕಾರ ನೀಡಲು ಅಮೆರಿಕ ಆಸಕ್ತವಾಗಿದೆ. ಉಭಯ ದೇಶಗಳು ಈ ಕ್ಷೇತ್ರದಲ್ಲಿ ಸಮಾನ ಆಸಕ್ತಿ ಹೊಂದಿವೆ’ ಎಂದು ಅಮೆರಿಕದ ಹಾಲ್ಟೆಕ್‌ ಸಂಸ್ಥೆಯ ಸಿಇಒ ಡಾ. ಕ್ರಿಸ್‌ ಸಿಂಗ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪರಸ್ಪರ ಸಹಕಾರ ಕುರಿತು ಪ್ರಗತಿಯನ್ನು ಕಾಣುವ ವಿಶ್ವಾಸ ತಮಗಿದೆ ಎಂದು ಕ್ರಿಸ್ ಸಿಂಗ್ ಹೇಳಿದರು.

ಶುದ್ಧ ಇಂಧನ ಕ್ಷೇತ್ರದಲ್ಲಿ ಭಾರತ– ಅಮೆರಿಕ ಕಾರ್ಯತಂತ್ರ ಪಾಲುದಾರಿಕೆ ಹೊಂದಿವೆ. ಸಹಜವಾಗಿ ಭಾರತಕ್ಕೆ ಹೆಚ್ಚಿನ ನೆರವಾಗಲಿದೆ. ಇದಕ್ಕಾಗಿ ಭಾರತ ರಫ್ತುಪೂರಕ ತಂತ್ರಜ್ಞಾನ ಹೊಂದುವುದು ಅಗತ್ಯ ಎಂದು ‘ಪಿಟಿಐ’ ಜೊತೆಗೆ ಮಾತನಾಡಿದ ಅವರು ಹೇಳಿದರು.

ADVERTISEMENT

ಹಾಲ್ಟೆಕ್‌ ಇಂಟರ್‌ನ್ಯಾಷನಲ್‌ ಇಂಧನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪ್ರಮುಖ ಕಂಪನಿಯಾಗಿದ್ದು, ಅಣುಶಕ್ತಿ ಮತ್ತು ಸೋಲಾರ್ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

ಕ್ರಿಸ್‌ ಸಿಂಗ್ ಅವರು ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.