ADVERTISEMENT

ಗುಡುಗು–ಸಿಡಿಲು ಸಹಿತ ಭಾರಿ ಮಳೆ: ಒಂದೇ ವಾರದಲ್ಲಿ ಭಾರತ, ನೇಪಾಳದಲ್ಲಿ 69 ಸಾವು

ಪಿಟಿಐ
Published 12 ಏಪ್ರಿಲ್ 2025, 6:41 IST
Last Updated 12 ಏಪ್ರಿಲ್ 2025, 6:41 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ಪಟ್ನಾ: ಭಾರತದ ಬಿಹಾರ ಹಾಗೂ ನೇಪಾಳದಲ್ಲಿ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಒಂದು ವಾರದಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿದ್ದಾರೆ ಎಂದು ಬಿಹಾರ ವಿಪತ್ತು ನಿರ್ವಹಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹಠಾತ್‌ ಪ್ರವಾಹ ಹಾಗೂ ಸಿಡಿಲಿಗೆ ಸಾಕಷ್ಟು ಮಂದಿ ಮೃತಪಡುತ್ತಿದ್ದರೂ, ಜಾಗತಿಕ ತಾಪಮಾನ ಏರಿಕೆಯು ತೀವ್ರ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ADVERTISEMENT

ಬಿಹಾರದಲ್ಲಿ ಗುರುವಾರ ಹಾಗೂ ಶುಕ್ರವಾರ ಕನಿಷ್ಠ 61 ಮಂದಿ ಸಾವಿಗೀಡಾಗಿದ್ದಾರೆ. ನೆರೆಯ ನೇಪಾಳದಲ್ಲಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶನಿವಾರವೂ ಬಿಹಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಗುಡುಗು–ಸಿಡಿಲು ಸಹಿತ ಭಾರಿ ಮಳೆ ಏರಿಕೆಗೆ ಹವಾಮಾನ ವೈಪರೀತ್ಯ ಕಾರಣ. ಪ್ರತಿವರ್ಷ ಸರಿಸುಮಾರು 1,900 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ತಜ್ಞರು ಕಳೆದ ವರ್ಷ ಹೇಳಿದ್ದರು.

1967–2020ರ ಅವಧಿಯಲ್ಲಿ 1,01,309 ಮಂದಿ ಸಿಡಿಲಿನಿಂದ ಮೃತಪಟ್ಟಿದ್ದಾರೆ. ಈ ಪ್ರಮಾಣವು 2010–2020ರ ಅವಧಿಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಒಡಿಶಾದ ಫಕೀರ್ ಮೋಹನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.