ADVERTISEMENT

ಹೊಸ ಮ್ಯಾಪ್‌ನಲ್ಲಿ ಭಾರತ ಸೇರಿದವು ಪಿಒಕೆ, ಗಿಲ್ಗಿಟ್–ಬಾಲ್ಟಿಸ್ತಾನ

ಪಿಟಿಐ
Published 3 ನವೆಂಬರ್ 2019, 6:01 IST
Last Updated 3 ನವೆಂಬರ್ 2019, 6:01 IST
   

ನವದೆಹಲಿ:ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ನಕ್ಷೆಯಲ್ಲಿ (ಮ್ಯಾಪ್‌) ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತುಗಿಲ್ಗಿಟ್–ಬಾಲ್ಟಿಸ್ತಾನ ಕೂಡ ಭಾರತದ ಗಡಿಯೊಳಗೆ ಸೇರಿದೆ.

ಜಮ್ಮು–ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಕ್ಟೋಬರ್ 31ರಂದು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ದೇಶದ ಹೊಸ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಇದರಲ್ಲಿ ಜಮ್ಮು–ಕಾಶ್ಮೀರದ ಗಡಿಯೊಳಗೆ ಪಿಒಕೆಯ ರಾಜಧಾನಿ ಮುಜಫರಾಬಾದ್‌ ಅನ್ನು ಗುರುತಿಸಲಾಗಿದೆ. ಹಾಗೆಯೇ ಲಡಾಖ್ ಗಡಿಯೊಳಗೆಗಿಲ್ಗಿಟ್–ಬಾಲ್ಟಿಸ್ತಾನವನ್ನೂ ಗುರುತಿಸಲಾಗಿದೆ.

ನಕ್ಷೆಯಲ್ಲಿ ಪಿಒಕೆಯ ಮುಜಫರಾಬಾದ್‌ ಅನ್ನು ಗುರುತಿಸಿರುವುದು

‘1947ರಲ್ಲಿ ಜಮ್ಮು–ಕಾಶ್ಮೀರ 14 ಜಿಲ್ಲೆಗಳನ್ನು ಒಳಗೊಂಡಿತ್ತು. ಅವುಗಳೆಂದರೆ ಕಥುವಾ, ಜಮ್ಮು, ಉಧಂಪುರ, ರೇಸಿ, ಅನಂತನಾಗ್, ಬಾರಾಮುಲ್ಲಾ, ಪೂಂಛ್, ಮೀರ್‌ಪುರ, ಮುಜಫರಾಬಾದ್, ಲೇಹ್, ಲಡಾಖ್, ಗಿಲ್ಗಿಟ್, ಗಿಲ್ಗಿಟ್ ವಜರತ್, ಚಿಲಾಸ್ ಮತ್ತು ಬುಡಕಟ್ಟು ಪ್ರದೇಶ’ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

2019ರ ವೇಳೆಗೆ ಒಟ್ಟು 28 ಜಿಲ್ಲೆಗಳಾಗಿ ಮರುವಿಂಗಡನೆಯಾಗಿವೆ. ಅವುಗಳಲ್ಲಿ ಹೊಸ ಜಿಲ್ಲೆಗಳು ಕುಪ್ವಾರ, ಬಂಡೀಪುರ, ಗಂದೇರ್‌ಬಾಲ್, ಶ್ರೀನಗರ, ಬುದ್ಗಾಂ, ಪುಲ್ವಾಮಾ, ಶೋಪಿಯಾನ್, ಕುಲ್ಗಾಂ, ರಾಜೌರಿ, ರಾಂಬಾನ್, ದೋಡಾ, ಕಿಶ್ತ್‌ವಾರ್, ಸಾಂಬಾ ಮತ್ತು ಕಾರ್ಗಿಲ್ಆಗಿವೆ.

ಹೊಸ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ರಾಜ್ಯಗಳ ಸಂಖ್ಯೆ28 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ9 ಆಗಿವೆ.

ಭಾರತದ ಹೊಸ ನಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.