ADVERTISEMENT

ಭಾರತ–ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಪಿಟಿಐ
Published 10 ಮೇ 2025, 14:10 IST
Last Updated 10 ಮೇ 2025, 14:10 IST
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್   

ಪಣಜಿ: ಭಾರತ–ಪಾಕಿಸ್ತಾನ ಬಿಕ್ಕಟ್ಟಿನ ಸ್ಥಿತಿ ಮುಂದುವರಿದಿರುವಂತೆಯೇ, ಗೋವಾ ಬಿಜೆಪಿ ಸದಸ್ಯರು ರಕ್ಷಣಾ ಸಚಿವರಾಗಿದ್ದ ದಿ. ಮನೋಹರ್ ಪರಿಕ್ಕರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ್ದಾರೆ. 

ದಿ. ಮನೋಹರ್ ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಾಗ ಭಾರತದ ರಕ್ಷಣಾ ವಲಯಕ್ಕೆ ಶಕ್ತಿ ತುಂಬಿದರು. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ದೇಶದ ಭದ್ರತಾ ವ್ಯವಸ್ಥೆಯನ್ನು ಕಡೆಗಣಿಸಿತ್ತು ಎಂದು ಗೋವಾದ ಬಿಜೆಪಿ ಘಟಕ ಶನಿವಾರ ಆರೋಪಿಸಿದೆ.

‘ಭಾರತದ ಪ್ರಬಲ ರಕ್ಷಣಾ ಮಂತ್ರಿಗಳಲ್ಲಿ ಒಬ್ಬರಾಗಿದ್ದ ಪರಿಕ್ಕರ್, ರಕ್ಷಣಾ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದರು. ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಾಗ ರಫೇಲ್ ಯುದ್ಧ ವಿಮಾನಗಳು, ಸೇನಾ ಯೋಧರಿಗೆ ಗುಂಡು ನಿರೋಧಕ ಜಾಕೆಟ್‌ಗಳು, ಹೆಲ್ಮೆಟ್ ಸೇರಿದಂತೆ ಇನ್ನಿತರ ಪ್ರಮುಖ ಪರಿಕರಗಳನ್ನು ಖರೀದಿಸಲಾಗಿತ್ತು. ಹೀಗಾಗಿ, ಮನೋಹರ್ ಪರಿಕ್ಕರ್ ಅವರಿಗೆ ಸೆಲ್ಯೂಟ್ ಮಾಡಲೇಬೇಕು’ ಎಂದು ಗೋವಾದ ಬಿಜೆಪಿ ಘಟಕದ ಅಧ್ಯಕ್ಷ ದಾಮೋದರ್ ನಾಯ್ಕ್ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.