ನವದೆಹಲಿ: ‘ಭಾರತ ಹಾಗೂ ಫಿಲಿಪ್ಪೀನ್ಸ್ ಸ್ನೇಹಿತರಾಗಿದ್ದು, ಪಾಲುದಾರ ರಾಷ್ಟ್ರಗಳಾಗಿವೆ. ಉಭಯ ರಾಷ್ಟ್ರಗಳು ಬಾಂಧವ್ಯದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಸೇನಾಪಡೆಗಳ ನಡುವಿನ ಸಹಭಾಗಿತ್ವಕ್ಕೂ ಆದ್ಯತೆ ನೀಡಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಫಿಲಿಪ್ಪೀನ್ಸ್‌ನ ಕರಾವಳಿಯಲ್ಲಿ ಉಭಯ ರಾಷ್ಟ್ರಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸಿದ ಮರುದಿನವೇ, ನವದೆಹಲಿಯಲ್ಲಿ ಫಿಲಿಪ್ಪೀನ್ಸ್‌ನ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೊತೆಗೆ ಸಭೆ ನಡೆಸಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
‘ಭಾರತ ಹಾಗೂ ಫಿಲಿಪ್ಪೀನ್ಸ್ ಸ್ನೇಹಿ ರಾಷ್ಟ್ರಗಳಾಗಿವೆ. ಹಿಂದೂ ಮಹಾಸಾಗರದಿಂದ ಫೆಸಿಫಿಕ್ ಸಾಗರದ ತನಕವೂ ನಮ್ಮ ನೀತಿಗೆ ಅನುಗುಣವಾಗಿ ಒಂದಾಗಿದ್ದೇವೆ’ ಎಂದು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಫಿಲಿಪ್ಪೀನ್ಸ್ ನಡೆಗೆ ಪ್ರಧಾನಿ ಮೋದಿ ಇದೇ ವೇಳೆ ಧನ್ಯವಾದ ಸಲ್ಲಿಸಿದರು.
ಶಾಂತಿ ಉದ್ದೇಶಕ್ಕಾಗಿ ಉಭಯ ರಾಷ್ಟ್ರಗಳ ಸೇನಾ ಪಡೆಗ ನಡುವೆ ಸಹಕಾರ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯಯಂತ್ರದ ಪಾಲುದಾರಿಕೆ ಸೇರಿದಂತೆ ಒಂಬತ್ತು ಒಪ್ಪಂದಗಳಿಗೆ ಸಹಿಹಾಕಿದವು.
ಫಿಲಿಪ್ಪೀನ್ಸ್‌ನಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕಂಪನಿಗಳು ಸಕ್ರಿಯ ಭಾಗಿ ಕೃತಕ ಬುದ್ಧಿಮತ್ತೆ, ತಯಾರಿಕಾ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ವಿಜ್ಞಾನ–ತಂತ್ರಜ್ಞಾನ ಸಹಕಾರಕ್ಕೆ ಎರಡು ರಾಷ್ಟ್ರಗಳ ನಿರ್ಧಾರ–ಪ್ರಧಾನಿ ಮೋದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.