ADVERTISEMENT

ಪರಿಸರ ಸೂಚ್ಯಂಕ: ಭಾರತಕ್ಕೆ ಕೊನೇ ಸ್ಥಾನ

ಪಿಟಿಐ
Published 7 ಜೂನ್ 2022, 19:32 IST
Last Updated 7 ಜೂನ್ 2022, 19:32 IST
ಪರಿಸರ (ಸಾಂದರ್ಭಿಕ ಚಿತ್ರ)
ಪರಿಸರ (ಸಾಂದರ್ಭಿಕ ಚಿತ್ರ)   

ನವದೆಹಲಿ: ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ. ಅತಿಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರವು ನಡೆಸಿದ ಅಧ್ಯಯನದ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗಿದೆ. ಒಟ್ಟು 180 ದೇಶಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪ್ರತಿ ದೇಶಗಳ ಸುಸ್ಥಿರ ಅಭಿವೃದ್ಧಿ ಮಾದರಿಗಳು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.

ಒಟ್ಟು ಅಂಕಗಳಲ್ಲಿ 18.9 ಅಂಕಗಳನ್ನು ಪಡೆದ ಭಾರತವು 180ನೇ ಸ್ಥಾನದಲ್ಲಿದೆ. ‘ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹೀಗಾಗಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ’ ಎಂದು ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ. 20.1 ಅಂಕ ಪಡೆದಿರುವ ವಿಯೆಟ್ನಾಂ, 23.1 ಅಂಕ ಪಡೆದಿರುವ ಬಾಂಗ್ಲಾದೇಶ ಮತ್ತು 24.6 ಅಂಕ ಪಡೆದಿರುವ ಪಾಕಿಸ್ತಾನವು ಕ್ರಮವಾಗಿ 179, 178 ಮತ್ತು 177ನೇ ಸ್ಥಾನ ಪಡೆದಿವೆ. 28.4 ಅಂಕ ಪಡೆದಿರುವ ಚೀನಾ 161ನೇ ಸ್ಥಾನದಲ್ಲಿದೆ. ರಷ್ಯಾವು 112ನೇ ಸ್ಥಾನದಲ್ಲಿದ್ದರೆ, ಅಮೆರಿಕವು 20ನೇ ಸ್ಥಾನದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.