ADVERTISEMENT

ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪಿಟಿಐ
Published 12 ಏಪ್ರಿಲ್ 2022, 13:29 IST
Last Updated 12 ಏಪ್ರಿಲ್ 2022, 13:29 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಅಹಮದಾಬಾದ್: ‘ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿದರೆ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಿದೆ’ ಎಂದುಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಮಂಗಳವಾರ ಅಹಮದಾಬಾದ್‌ ಬಳಿಯಲ್ಲಿನ ಅದಾಲಜ್‌ನಲ್ಲಿನ ಅನ್ನಪೂರ್ಣ ಧಾಮ ಟ್ರಸ್ಟ್‌ನ ಬಾಲಕರ ವಸತಿ ನಿಲಯವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಮೋದಿ, ‘ನಾನು ಅಮೆರಿಕ ಅಧ್ಯಕ್ಷರೊಡನೆ ಮಾತನಾಡುವಾಗ ಆಹಾರ ದಾಸ್ತಾನಿನ ಕೊರತೆಯ ವಿಷಯವನ್ನ ಎತ್ತಿದರು. ಆಗ, ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿದರೆ ಭಾರತ ನಾಳೆಯಿಂದಲೇ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸುತ್ತದೆ ಎಂದು ಹೇಳಿದ್ದೇನೆ’ ಎಂದು ತಿಳಿಸಿದರು.

‘ರಷ್ಯಾ – ಉಕ್ರೇನ್‌ನ ಯುದ್ಧದಿಂದಾಗಿ ಜಗತ್ತಿನ ವಿವಿಧೆಡೆ ಆಹಾರದ ಅಭಾವ ಕಾಡುತ್ತಿದೆ. ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ಭಾರತದಲ್ಲಿ ಕಳೆದ ಎರಡು ವರ್ಷದಿಂದ ಸುಮಾರು 80 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನ ಪೂರೈಸಲಾಗಿದೆ. ಇದು ಇತರ ರಾಷ್ಟ್ರಗಳಿಗೆ ಅಚ್ಚರಿ ಉಂಟು ಮಾಡಿದೆ. ಇಂದು ಯುದ್ಧದಿಂದಾಗಿ ಜಗತ್ತುಮತ್ತೆ ಅನಿಶ್ಚಿತ ಸ್ಥಿತಿಯನ್ನ ಎದುರಿಸುತ್ತಿದೆ. ಎಲ್ಲ ಬಾಗಿಲುಗಳೂ ಮುಚ್ಚಿರುವುದರಿಂದ ತೈಲ ಉತ್ಪನ್ನಗಳನ್ನು ಸಂಗ್ರಹಿಸಲು ಕಷ್ಟಸಾಧ್ಯವಾಗುತ್ತಿದೆ. ಯುದ್ಧ ಪ್ರಾರಂಭವಾದಾಗಿನಿಂದ ಎಲ್ಲರೂ ತಮ್ಮ ದಾಸ್ತಾನನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆ’ ಎಂದು ಮೋದಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.