ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು1,968 ಹೊಸಕೋವಿಡ್ ಪ್ರಕರಣಗಳನ್ನು ಕಂಡಿದೆ.133 ದಿನಗಳಲ್ಲಿದಾಖಲಾದ ಅತಿ ಕಡಿಮೆ ಪ್ರಕರಣಗಳಿವು. ಸದ್ಯ ದೇಶದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ4,45,99,466 ಕ್ಕೆ ಏರಿದೆ.
ದೇಶದಲ್ಲಿಪ್ರಸ್ತುತ34,598 ಸಕ್ರಿಯ ಪ್ರಕರಣಗಳಿವೆ ಎಂಬುದು ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈ ಒಂದು ದಿನದ ಅವಧಿಯಲ್ಲಿ ಕೋವಿಡ್ ಕಾರಣದಿಂದಾಗಿ 15 ಸಾವುಗಳಾಗಿವೆ. ಈ ಪೈಕಿ 8 ಸಾವುಗಳು ಕೇರಳದಿಂದಲೇ ವರದಿಯಾಗಿವೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 5,28,716 ಕ್ಕೆ ಏರಿದೆ.
ದೇಶದ ದೈನಂದಿನಪಾಸಿಟಿವಿಟಿ ದರ ಶೇಕಡಾ 0.94 ರಷ್ಟು ಇದೆ.
ಆರೋಗ್ಯ ಇಲಾಖೆಮಾಹಿತಿಪ್ರಕಾರ, ದೇಶದಲ್ಲಿ ಈ ವರೆಗೆ 218.80 ಕೋಟಿಕೋವಿಡ್ ಲಸಿಕೆಡೋಸ್ಗಳನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.