ADVERTISEMENT

ತೆರಿಗೆ ಪಾಲು ಹಂಚಿಕೆ: UPಗೆ ಗರಿಷ್ಠ ₹31,039 ಕೋಟಿ; ಕರ್ನಾಟಕಕ್ಕೆ ₹6,310 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 9:17 IST
Last Updated 10 ಜನವರಿ 2025, 9:17 IST
<div class="paragraphs"><p>ತೆರಿಗೆ ಹಣ</p></div>

ತೆರಿಗೆ ಹಣ

   

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,73,030 ಕೋಟಿ ಬಿಡುಗಡೆಗೊಳಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. 2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆಗೊಳಿಸಿತ್ತು.

ADVERTISEMENT

ರಾಜ್ಯಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅದರಂತೆ ರಾಜ್ಯಗಳಿಗೆ ಬಿಡುಗಡೆಯಾದ ಹಣದ ಪ್ರಮಾಣ ಹೀಗಿದೆ...

1. ಆಂಧ್ರಪ್ರದೇಶ – ₹7,002.52 ಕೋಟಿ

2. ಅರುಣಾಚಲ ಪ್ರದೇಶ– ₹3,040.14 ಕೋಟಿ

3. ಅಸ್ಸಾಂ– ₹5,412.38 ಕೋಟಿ

4. ಬಿಹಾರ– ₹17,403.36 ಕೋಟಿ

5. ಛತ್ತೀಸಗಢ– ₹5,895.13 ಕೋಟಿ

6. ಗೋವಾ– ₹667.91 ಕೋಟಿ

7. ಗುಜರಾತ್– ₹6,017.99 ಕೋಟಿ

8. ಹರಿಯಾಣ– ₹1,891.22 ಕೋಟಿ

9. ಹಿಮಾಚಲ ಪ್ರದೇಶ– ₹1,436.16 ಕೋಟಿ

10. ಜಾರ್ಖಂಡ್– ₹5,722.10 ಕೋಟಿ

11. ಕರ್ನಾಟಕ– ₹6,310.40 ಕೋಟಿ

12. ಕೇರಳ– ₹3,330.83 ಕೋಟಿ

13. ಮಧ್ಯಪ್ರದೇಶ– ₹13,582.86 ಕೋಟಿ

14. ಮಹಾರಾಷ್ಟ್ರ– ₹10,930.31 ಕೋಟಿ

15. ಮಣಿಪುರ– ₹1,238.90 ಕೋಟಿ

16. ಮೇಘಾಲಯ– ₹1,327.13 ಕೋಟಿ

17. ಮೀಜೋರಾಂ– ₹865.15 ಕೋಟಿ

18. ನಾಗಾಲ್ಯಾಂಡ್– ₹984.54 ಕೋಟಿ

19. ಒಡಿಶಾ– ₹7,834.80 ಕೋಟಿ

20. ಪಂಜಾಬ್– ₹3,126.65 ಕೋಟಿ

21. ರಾಜಸ್ಥಾನ– ₹10,426.78 ಕೋಟಿ

22. ಸಿಕ್ಕಿಂ– ₹671.35 ಕೋಟಿ

23. ತಮಿಳುನಾಡು– ₹7,057.89 ಕೋಟಿ

24. ತೆಲಂಗಾಣ– ₹3,637.09 ಕೋಟಿ

25. ತ್ರಿಪುರಾ– ₹1,225.04 ಕೋಟಿ

26. ಉತ್ತರಪ್ರದೇಶ– ₹31,039.84 ಕೋಟಿ

27. ಉತ್ತರಾಖಂಡ– ₹1,934.47 ಕೋಟಿ

28. ಪಶ್ಚಿಮ ಬಂಗಾಳ– ₹13,017.06 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.