ADVERTISEMENT

ಪೂರ್ವ ಲಡಾಖ್‌: ಬಂಧಿತ ಸೈನಿಕ ಚೀನಾಗೆ ಹಸ್ತಾಂತರ

ಪಿಟಿಐ
Published 11 ಜನವರಿ 2021, 7:36 IST
Last Updated 11 ಜನವರಿ 2021, 7:36 IST
ಲಡಾಖ್‌ ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು (ಎಎಫ್‌ಪಿ ಚಿತ್ರ)
ಲಡಾಖ್‌ ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು (ಎಎಫ್‌ಪಿ ಚಿತ್ರ)   

ನವದೆಹಲಿ: ಮೂರು ದಿನಗಳ ಹಿಂದೆ ಪೂರ್ವ ಲಡಾಖ್‌ ಪ್ರದೇಶದಲ್ಲಿ ಭಾರತದ ಸೈನಿಕರು ಬಂಧಿಸಿದ್ದ ಚೀನಾದ ಸೈನಿಕನನ್ನು ಸೋಮವಾರ ಚೀನಾಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿ(ಪಿಎಲ್‌ಎ)ಗೆ ಸೇರಿದ ಸೈನಿಕನನ್ನು ಶುಕ್ರವಾರ ಬೆಳಿಗ್ಗೆ ಪೂರ್ವ ಲಡಾಖ್‌ನ ಪಾಗೊಂಗ್‌ ತ್ಸೊದ ದಕ್ಷಿಣ ಭಾಗದಲ್ಲಿ ಬಂಧಿಸಲಾಗಿತ್ತು. ಈತ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸುತ್ತಿದ್ದಕ್ಕಾಗಿ ಬಂಧಿಸಲಾಗಿತ್ತು.

ಪೂರ್ವ ಲಡಾಖ್‌ನ ಚುಶಲ್‌– ವೊಲ್ಡೊ ಗಡಿ ಭಾಗದಲ್ಲಿ ಸೋಮವಾರ ಬೆಳಿಗ್ಗೆ 10.10 ಗಂಟೆಗೆ ಬಂಧಿತ ಸೈನಿಕನನ್ನು ಚೀನಾಗೆ ಹಸ್ತಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಪೂರ್ವ ಲಾಡಾಖ್‌ನ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ದೇಶಗಳು ವಾಸ್ತವ ನಿಯಂತ್ರಣ ರೇಖೆ ಉದ್ದಕ್ಕೂ ಸೈನಿಕರನ್ನು ಜಮಾವಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.