ನವದೆಹಲಿ: ಸೇನಾಪಡೆಗಳಲ್ಲಿ ಸಹಾಯಕ ಸಿಬ್ಬಂದಿಯಾಗಿ ಭಾರತೀಯರನ್ನು ನೇಮಿಸಿಕೊಳ್ಳುವ ಪ್ರವೃತ್ತಿಯನ್ನು ಕೊನೆಗೊಳಿಸಿ ಎಂದು ರಷ್ಯಾ ಸರ್ಕಾರವನ್ನು ಭಾರತ ಆಗ್ರಹಿಸಿದೆ. ಜತೆಗೆ ಈಗಾಗಲೇ ರಷ್ಯಾ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರನ್ನೂ ಬಿಡುಗಡೆಗೊಳಿಸುವಂತೆ ಕೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ರಷ್ಯಾದ ಸೇನಾಪಡೆಗಳಿಗೆ ಭಾರತೀಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ರಷ್ಯಾ ಆಡಳಿತದೊಂದಿಗೆ ಮಾತುಕತೆ ನಡೆಸಿ, ಭಾರತೀಯರ ನೇಮಕವನ್ನು ನಿಲ್ಲಿಸುವಂತೆ ಕೇಳಲಾಗಿದೆ’ ಎಂದಿದ್ದಾರೆ.
ಅಲ್ಲದೇ, ‘ರಷ್ಯಾ ಸೇನಾಪಡೆಗಳನ್ನು ಸೇರುವ ಅವಕಾಶ ಬಂದರೆ ಅವುಗಳಿಂದ ದೂರವಿರಿ. ಅಲ್ಲಿನ ಕೆಲಸಗಳು ಅಪಾಯವನ್ನು ತಂದೊಡ್ಡಬಹುದು, ಎಚ್ಚರದಿಂದಿರಿ’ ಎಂದು ಭಾರತೀಯ ನಾಗರಿಕರಿಗೆ ಜೈಸ್ವಾಲ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.