ಭಾರತ– ಸೌದಿ ಅರೇಬಿಯಾದ ಸಂಬಂಧ ಅಪರಿಮಿತ ಸಾಮರ್ಥ್ಯದ್ದು: ಪ್ರಧಾನಿ ಮೋದಿ
ಪಿಟಿಐ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ. ಈ ಭೇಟಿಯಲ್ಲಿ ಕನಿಷ್ಠ ಆರು ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ.
ಭೇಟಿಗೂ ಮುನ್ನ ಅರಬ್ ನ್ಯೂಸ್ ಜತೆಗಿನ ಸಂದರ್ಶದ ವೇಳೆ ಮಾತನಾಡಿರುವ ಮೋದಿ, ಶಾಂತಿ, ಪ್ರಗತಿ ಮತ್ತು ಸಮೃದ್ಧಿಯೊಂದಿಗೆ ನಮ್ಮ ಜನರಿಗಾಗಿ ಮಾತ್ರವಲ್ಲ, ಇಡೀ ಜಗತ್ತಿಗಾಗಿ ಭಾರತ ಮತ್ತು ಸೌದಿ ಆರೇಬಿಯಾ ಮುಂದೆ ಸಾಗಲಿದೆ. ಭಾರತ ನತ್ತು ಸೌದಿ ಅರೇಬಿಯಾದ ಸಂಬಂಧ ಅಪರಿಮಿತ ಸಾಮರ್ಥ್ಯದ್ದಾಗಿದೆ. ಭಾರತದ ಅತ್ಯಂತ ಮೌಲ್ಯಯುತ ಪಾಲುದಾರಲಲ್ಲಿ ಸೌದಿ ಕೂಡ ಸೇರಿದೆ. ಸೌದಿ ಭಾರತದ ವಿಶ್ವಾಸಾರ್ಹ ಸ್ನೇಹಿತ ಮತ್ತು ಮಿತ್ರ ರಾಷ್ಟ್ರ ಎಂದು ಬಣ್ಣಿಸಿದರು.
ಎರಡೂ ದೇಶಗಳು ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಮೇಲೆ ಕೆಲಸ ಮಾಡುತ್ತಿವೆ ಎಂದು ಹೇಳಿದ ಅವರು, ಭಾರತ ಮತ್ತು ಜಿಸಿಸಿ (ಗಲ್ಫ್ ಸಹಕಾರ ಮಂಡಳಿ) ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವು ಭಾರತ ಮತ್ತು ಸೌದಿ ಅರೇಬಿಯಾ ಮತ್ತು ಒಟ್ಟಾರೆಯಾಗಿ ಪ್ರದೇಶದ ನಡುವಿನ ಆರ್ಥಿಕ ಸಂಬಂಧವನ್ನು ಪರಿವರ್ತಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಉಭಯ ದೇಶಗಗಳ ಸಂಬಂಧ ಮುಂಗಾರಿನ ಮಾರುತದಷ್ಟು ಹಳೆಯದಾಗಿದೆ. ಜಾಗತಿಕ ಸಮಸ್ಯೆಗಳನ್ನು ಎದುರಿಸಿ ಬೆಳೆದ ರಾಷ್ಟ್ರಗಳಿವು ಎಂದು ಹೇಳಿದರು.
ಭಾರತದ ವ್ಯವಹಾರ ಮತ್ತು ಸೌದಿ ಉದ್ಯಮ ನಿಕಟ ಸಂಪರ್ಕವನ್ನು ಹೊಂದಿದೆ. ಇಂಧನ, ಕೃಷಿ, ರಸಗೊಬ್ಬರ ಪ್ರಮುಖ ವ್ಯಾಪಾರ ಕ್ಷೇತ್ರಗಳಾಗಿವೆ. ಎರಡು ರಾಷ್ಟ್ರಗಳ ನಡುವೆ ಕಲ್ಪನೆಗಳಿಂದ ವ್ಯಾಪಾರದವರೆಗೆ ನಿರಂತರ ನಂಟಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.