ADVERTISEMENT

ದೇಶದಾದ್ಯಂತ ಕಳೆದ ಐದು ವರ್ಷಗಳಲ್ಲಿಯೇ ನವೆಂಬರ್‌ನಲ್ಲಿ ಅತಿಹೆಚ್ಚು ಮಳೆ ದಾಖಲು!

ಭಾರತೀಯ ಹವಾಮಾನ ಇಲಾಖೆ ಹೇಳಿಕೆ

ಪಿಟಿಐ
Published 1 ಡಿಸೆಂಬರ್ 2021, 13:14 IST
Last Updated 1 ಡಿಸೆಂಬರ್ 2021, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ’ನವೆಂಬರ್‌ನಲ್ಲಿ ದೇಶದಾದ್ಯಂತ 645 ಬಾರಿ ಹೆಚ್ಚು ಮಳೆ ಹಾಗೂ 168 ಬಾರಿ ಅತಿಹೆಚ್ಚು ಮಳೆಯಾಗಿದ್ದು, ಐದು ವರ್ಷಗಳಲ್ಲಿ ದಾಖಲಾದ ಅತಿಹೆಚ್ಚು ಮಳೆಯ ಪ್ರಮಾಣವಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

‘ಹೆಚ್ಚು ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ 44 ಜನ, ತಮಿಳುನಾಡಿನಲ್ಲಿ 16 ಜನ, ಕರ್ನಾಟಕದಲ್ಲಿ 15 ಜನ ಮತ್ತು ಕೇರಳದಲ್ಲಿ ಮೂವರು ಸಾವಿಗೀಡಾಗಿದ್ದಾರೆ’ ಎಂದು ಪೆನಿನ್ಸುಲರ್ ಇಂಡಿಯಾ ವರದಿ ಮಾಡಿದೆ.

‘ನವೆಂಬರ್‌ ತಿಂಗಳಲ್ಲಿ 204.5 ಮಿ.ಮೀಗಿಂತ ಹೆಚ್ಚಿನ ಮಳೆ 11 ಬಾರಿ ಸುರಿದಿದೆ. ಇದು ಕಳೆದ ವರ್ಷ ವರದಿಯಾದ ಮಳೆಯ ಪ್ರಮಾಣಕ್ಕೆ ಸಮನಾಗಿದೆ. 2019, 2018 ಮತ್ತು 2017ರಲ್ಲಿ ಕ್ರಮವಾಗಿ ಶೂನ್ಯ, 4 ಮತ್ತು ಒಂದು ಸಲ ಮಾತ್ರ ಅತಿಹೆಚ್ಚು ಮಳೆಯಾಗಿದೆ. ದೇಶದಲ್ಲಿ ನವೆಂಬರ್‌ನಲ್ಲಿ 645 ಬಾರಿ ಹೆಚ್ಚು ಮಳೆ (64.5 ಮಿ.ಮೀನಿಂದ 115.5 ಮಿ.ಮೀ) ಹಾಗೂ 168 ಬಾರಿ ಅತಿಹೆಚ್ಚು ಮಳೆ (115.6 ಮಿ.ಮೀನಿಂದ 204.5 ಮಿ.ಮೀ) ಮಳೆಯಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ADVERTISEMENT

ವರ್ಷ: ಮಳೆಯ ಸಂಖ್ಯೆ

2017 139

2018 135

2019 116

2020 247

2021 645

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.