ADVERTISEMENT

ಸೀಹಾಕ್‌ ಹೆಲಿಕಾಪ್ಟರ್‌: ₹7,995 ಕೋಟಿ ಒಪ್ಪಂದಕ್ಕೆ ಸಹಿ

ಪಿಟಿಐ
Published 28 ನವೆಂಬರ್ 2025, 20:44 IST
Last Updated 28 ನವೆಂಬರ್ 2025, 20:44 IST
ಸೀಹಾಕ್‌ ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)
ಸೀಹಾಕ್‌ ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ಭಾರತೀಯ ನೌಕಾಪಡೆಗೆ 24 ಸೀಹಾಕ್‌ ಹೆಲಿಕಾಪ್ಟರ್‌ಗಳನ್ನು ಐದು ವರ್ಷಗಳಲ್ಲಿ ಪೂರೈಸಲು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಮೊತ್ತವನ್ನು ₹7,995 ಕೋಟಿಗೆ ನಿಗದಿಪಡಿಸಿ, ಭಾರತ ಹಾಗೂ ಅಮೆರಿಕ ಸಹಿ ಮಾಡಿವೆ.

ಆಗಸ್ಟ್ ಅಂತ್ಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸ್ವಲ್ಪ ಒಡಕು ಮೂಡಿರುವುದರ ಮಧ್ಯೆಯೇ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಲಾಕ್‌ಹೀಡ್‌ ಮಾರ್ಟಿನ್‌ ಕಾರ್ಪೊರೇಷನ್‌ ತಯಾರಿಸಿದ ‘ಎಂಎಚ್‌–60ಆರ್‌’ಎಲ್ಲ ಹವಾಮಾನದಲ್ಲೂ ಬಳಸಬಹುದಾದ ಹೆಲಿಕಾಪ್ಟರ್‌ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ ಮತ್ತು ಸಂವೇದಕಗಳೊಂದಿಗೆ ಬಹು ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.