
ನವದೆಹಲಿ: ಗಾಜಾದಲ್ಲಿ ಶಾಶ್ವತ ಶಾಂತಿ ನೆಲಸುವಂತೆ ಮಾಡುವ ಉದ್ದೇಶದಿಂದ ರಚಿಸಿರುವ ‘ಶಾಂತಿ ಮಂಡಳಿ’ಗೆ ಸಹಿ ಹಾಕುವುದಕ್ಕೆ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಿಂದ ಭಾರತ ದೂರ ಉಳಿದಿದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಫ್ರಾನ್ಸ್, ಬ್ರಿಟನ್, ಚೀನಾ, ಜರ್ಮನಿ ಸೇರಿ ಇತರ ಹಲವು ದೇಶಗಳು ಕೂಡ ಗೈರಾಗಿದ್ದವು.
‘ಶಾಂತಿ ಮಂಡಳಿ’ ಭಾಗವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟ್ರಂಪ್ ಆಹ್ವಾನ ನೀಡಿದ್ದಾರೆ. ಈ ಕುರಿತು ಭಾರತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಇಸ್ರೇಲ್ ಹಾಗೂ ಗಾಜಾ ಪಟ್ಟಿಯ ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಟ್ರಂಪ್ ಈ ‘ಶಾಂತಿ ಮಂಡಳಿ’ ರಚಿಸಿದ್ದಾರೆ. ಪಾಕಿಸ್ತಾನ, ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಸೇರಿ ಹಲವು ರಾಷ್ಟ್ರಗಳು ಈ ಮಂಡಳಿ ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.