ADVERTISEMENT

ಯಶಸ್ವಿಯಾಗಿ ‘ಅಭ್ಯಾಸ್’ ಏರ್‌ಕ್ರಾಫ್ಟ್‌ನ ಪರೀಕ್ಷೆ ನಡೆಸಿದ ಡಿಆರ್‌ಡಿಒ

ಪಿಟಿಐ
Published 23 ಅಕ್ಟೋಬರ್ 2021, 2:39 IST
Last Updated 23 ಅಕ್ಟೋಬರ್ 2021, 2:39 IST
ಪಾಕಿಸ್ತಾನ ಪತ್ರಕರ್ತೆ ಅರೂಸಾ ಅಲಂ
ಪಾಕಿಸ್ತಾನ ಪತ್ರಕರ್ತೆ ಅರೂಸಾ ಅಲಂ    

ಭುವನೇಶ್ವರ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವೇಗದ ವಾಯು ಗುರಿ ಭೇದಿಸುವ ‘ಅಭ್ಯಾಸ್’ಫ್ಲೈಟ್ ಪರೀಕ್ಷೆಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪೂರೈಸಿದೆ.

ಒಡಿಶಾದ ಬಂಗಾಳಕೊಲ್ಲಿಯ ತೀರದ ಚಾಂದೀಪುರದಲ್ಲಿ ಈ ಪರೀಕ್ಷೆ ನಡೆದಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ಈ ವಾಹನವನ್ನು ವೈಮಾನಿಕ ಗುರಿಯಾಗಿ ಬಳಸಬಹುದು ಎಂದು ಅವರು ಹೇಳಿದ್ಧಾರೆ.

ಏರ್‌ಕ್ರಾಫ್ಟ್‌ನ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ, ರಾಡಾರ್‌ಗಳು ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸೆನ್ಸಾರ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

‘ಅಭ್ಯಾಸ್‌’ನ ಯಶಸ್ವಿ ಪ್ರಯೋಗಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಅನ್ನು ಅಭಿನಂದಿಸಿದರು.

ಪ್ರಸ್ತುತ ಪರೀಕ್ಷೆಯು ಯುದ್ಧ ವಿಮಾನಗಳ ಅಭಿವೃದ್ಧಿ ಪ್ರಯೋಗಗಳ ಭಾಗವಾಗಿ ನಡೆಸಲಾಯಿತು. ಈಗಾಗಲೇ ಭಾರತೀಯ ಕಂಪನಿಗಳಿಂದ ಈ ಏರ್‌ಕ್ರಾಫ್ಟ್ ತಯಾರಿಕೆಗೆ ಬಿಡ್ಡಿಂಗ್‌ ಕರೆಯಲಾಗಿದೆ. ಈ ದೇಶೀಯ ತಂತ್ರಜ್ಞಾನದ ವಿಮಾನ ಉತ್ಪಾದನೆ ಆರಂಭವಾದ ಬಳಿಕ ಭಾರತೀಯ ಸಶಸ್ತ್ರ ಪಡೆಗಳಿಗೆ ಹೈ-ಸ್ಪೀಡ್ ಎಕ್ಸ್‌ಪೆಂಡಬಲ್ ಏರಿಯಲ್ ಟಾರ್ಗೆಟ್‌ಗಳ (ಎಚ್‌ಇಎಟಿ) ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.