ADVERTISEMENT

ಮಧ್ಯಮ ಕ್ರಮಾಂಕದ ಕ್ಷಿಪಣಿ ಪ್ರಯೋಗ ಯಶಸ್ವಿ

ಪಿಟಿಐ
Published 27 ಮಾರ್ಚ್ 2022, 10:06 IST
Last Updated 27 ಮಾರ್ಚ್ 2022, 10:06 IST
ಭಾರತ ಮಧ್ಯಮ ಕ್ರಮಾಂಕದ ಕ್ಷಿಪಣಿ ‘ಎಂಆರ್‌ಎಸ್‌ಎಎಂ’ನ ಪರೀಕ್ಷಾರ್ಥ ಪ್ರಯೋಗವನ್ನು ಭಾನುವಾರ ಒಡಿಶಾದ ಚಾಂದಿಪುರ್‌ನಲ್ಲಿ ನಡೆಸಿತು.
ಭಾರತ ಮಧ್ಯಮ ಕ್ರಮಾಂಕದ ಕ್ಷಿಪಣಿ ‘ಎಂಆರ್‌ಎಸ್‌ಎಎಂ’ನ ಪರೀಕ್ಷಾರ್ಥ ಪ್ರಯೋಗವನ್ನು ಭಾನುವಾರ ಒಡಿಶಾದ ಚಾಂದಿಪುರ್‌ನಲ್ಲಿ ನಡೆಸಿತು.   

ಬಾಲಾಸೋರ್ (ಪಿಟಿಐ): ಭಾರತ ತನ್ನ ಮಧ್ಯಮ ಶ್ರೇಣಿಯ ವಾಯುಮಾರ್ಗದಲ್ಲಿ ಗುರಿಯಾಗಿಸಿಭೂಮಿಯಿಂದ ಪ್ರಯೋಗಿಸಬಹುದಾದ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನುಒಡಿಶಾದ ಚಾಂದಿಪುರ್‌ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಸಿತು.

ದೂರಗಾಮಿ ಗುರಿಯನ್ನು ಅಂದಾಜಿಸಿ ಅತಿವೇಗವಾಗಿ ಮುನ್ನುಗ್ಗುವ ಈ ಕ್ಷಿಪಣಿಯ ಪ್ರಯೋಗ ಬೆಳಿಗ್ಗೆ 10.30ಕ್ಕೆ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೇಳಿಕೆಯಲ್ಲಿ ತಿಳಿಸಿದೆ.

ದೀರ್ಘ ಅಂತರದ ವಾಯುನೆಲೆಯನ್ನು ಗುರಿಯಾಗಿಸಿ ಅಧಿಕ ವೇಗದ ಕ್ಷಿಪಣಿ ಪ್ರಯೋಗಿಸಲಾಯಿತು. ನೇರದಾಳಿಯಲ್ಲಿ ಕ್ಷಿಪಣಿಯು ಗುರಿಯನ್ನು ಧ್ವಂಸಗೊಳಿಸಿತು ಎಂದು ವಿವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.